ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ 

ನ್ಯಾಮತಿ. ಸೆ.೨೨; ಪಟ್ಟಣದ ಕಾಳಿಕಾಂಬ ಬೀದಿಯ , ಅರಳೆಕಟ್ಟಿ ವೃತ್ತದ ಹಾಗೂ ವೀರಭದ್ರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ  ಅದ್ದೂರಿಯಾಗಿ ನಡೆಯಿತು.ಕಾಳಿಕಾಂಬ ಬೀದಿಯ ರೈತ ಯುವ ಮುಖಂಡರು ತರಕಾರಿ ಗಣಪತಿ ಸೇವಾ ಸಂಘ ಸಮಿತಿ , ಅರಳಿಕಟ್ಟಿ ವೃತ್ತದ ಹಿಂದೂ ಮಹಾಸಭಾ ಗಣಪತಿ ಹಾಗೂ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿ ವೀರಭದ್ರ ಸ್ವಾಮಿ ವಿನಾಯಕ ಸೇವಾ ಸಮಿತಿಯವರ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ ಬುಧವಾರ ಅಲಂಕೃತ ಟ್ಯಾಕ್ಟರ್ ನಲ್ಲಿ ಮೂರು ಗಣಪತಿಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಮರವಣಿಗೆಯನ್ನು ಪಟ್ಟಣದ ಬೀದಿಗಳಲ್ಲಿ ನಡೆಸಲಾಯಿತು.ಮೆರವಣಿಗೆಯ ಮುನ್ನ ಪ್ರತಿಷ್ಠಾಪಿಸಲಾಗಿದ್ದ ಸ್ಥಳಗಳಲ್ಲಿ ವಿನಾಯಕ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ ಮಧ್ಯಾಹ್ನ 2 ಗಂಟೆಗೆ ಅಲಂಕೃತ ಟ್ಯಾಕ್ಟರ್‌ಗೆ ಒಂದೊAದೇ ಮೂರ್ತಿಗಳನ್ನು ಕಾಳಿಕಾಂಬ ಬೀದಿಯ ಶ್ರೀ ಕಾಳಿಕದೇವಿಯ ದೇಗುಲದ ಅವರಣದಲ್ಲಿ ತಂದು ಸರ್ವಾಲಂಕಾರ ಭೂಷಿತ ವಿಘ್ನೇಶ್ವರನನ್ನು ಕುಳ್ಳಿರಿಸಿ ವಿವಿಧ ಮುಖಂಡರುಗಳು ಹೂವಿನ ಹಾರಗಳನ್ನ ಮೆರವಣಿಗೆಯ ಮೂಲಕ ತಂದು ಅಲಂಕರಿ ಪೂಜೆಸಲಾಯಿತು.ಗಾಂಧಿ ವೃತ್ತಕ್ಕೆ ವಿಘ್ನೇಶ್ವರನ ಮೆರವಣಿಗೆ ಬಂದಾಗ ಕಿವಿಗಡಚಿಕ್ಕುವ ಪಟಾಕಿ ಸಿಡಿಸಿ ಪುರಜನರು ಸ್ವಾಗತಿಸಿದರು. ಮೆರವಣಿಗೆಯುದ್ದಕ್ಕೂ ಪಟ್ಟಣದ ನಿವಾಸಿಗಳು, ವರ್ತಕರು ತಮ್ಮ ಮನೆ, ಅಂಗಡಿ ಮುಂಗಟ್ಟುಗಳ ಮುಂದೆ ರಸ್ತೆಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ ಗಣೇಶನನ್ನು ಸ್ವಾಗತಿಸುತ್ತಾ, ಹಣ್ಣುಕಾಯಿ ಪೂಜೆ ಸಲ್ಲಿಸಿ, ಭಕ್ತಿಯಿಂದ ನಮಿಸಿದರು.

.