ವಿನಾಕಾರಣ ರಸ್ತೆಗೆ ಬಂದ 480 ವಾಹನ ಸೀಜ್

ಬಳ್ಳಾರಿ, ಮೇ.20: ಸಂಪೂರ್ಣ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಓಡಾಡಲು ಬಂದ 480 ವಾಹನಗಳನ್ನು ನಿನ್ನೆ ಜಿಲ್ಲೆಯಲ್ಲಿ ಪೊಲೀಸರು ಸೀಜ್ ಮಾಡಿದ್ದಾರೆ ಎಂದು ಎಸ್ಪಿ ಸೈದುಲ ಅಡಾವತ್ ಪತ್ರಿಕಾ ಅಡಾವತ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ 22 ಜನರ ವಿರುದ್ದ ಎಫ್ ಐ ಆರ್ ದಾಖಲಿಸಿದೆ.
ಇದೇ ರೀತಿ‌ ಇಂದು ಸಹ ನಿಯಮ ಉಲ್ಲಂಘನೆ ‌ಮಾಡಿ ಓಡಾಡಿದ ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿರುವ ಬಗ್ಗೆ ವರದಿ ಇದೆ.
ಆರೋಗ್ಯ ಸಪಾಸಣೆ, ಔಷಧಿ ಖರೀದಿ ಮತ್ತು ಅನುಮತಿ ನೀಡಿರುವವರು ಬಿಟ್ಟು ಬರುವ ಸೋಮವಾರ ಬೆಳಿಗ್ಗೆ 6 ವರಗೆ ಹೊರಗೆ ತಿರುಗಾಡದಂತೆ ಆದೇಶ ಇದೆ.