ವಿನಾಃ ಕಾರಣ ಅನ್ಯರಿಗೆ ದ್ವೇಷಿಸುವದು ಬೇಡಾ :ನಾಗೇಶ

ತಾಳಿಕೋಟೆ, ಯಾವುದೇ ಚಟಗಳಿಗೆ ಆಧಿನರಾಗುವ ಮುನ್ನ ಆಯಾ ದುಶ್ಚಟಕ್ಕೆ ಅಂಟಿಕೊಳ್ಳದೇ ಹಾಗೆ ಮುಂದಾಲೋಚನೆ ಮಾಡಿಕೊಂಡು ದೂರವಿರುವ ಕಾರ್ಯ ಮಾಡಬೇಕು ಇದರಿಂದ ವ್ಯವಸ್ಥಿತವಾಗಿ ಕುಟುಂಬದ ಜೀವನ ಸಾಗಿಸಲು ಅನುಕೂಲವಾಗಿದೆ ಎಂದು ತಾಲೂಕಾ ಯೋಜನಾಧಿಕಾರಿ ನಾಗೇಶ ಎನ್.ಪಿ.ಅವರು ನುಡಿದರು.
ಶುಕ್ರವಾರರಂದು ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ ವತಿಯಿಂದ ಶ್ರೀ ಕಾಳಿಕಾದೇವಿ ಮಂದಿರದ ಸಭಾಭವನದಲ್ಲಿ ಏರ್ಪಡಿಸಲಾದ ಮಧಯವೆಸನ ಮುಕ್ತಿ ಶಿಬಿರದ ಶಿಬಿರಾರ್ಥಿಗಳ ಅನುಭವ ಕಥನ ಹಾಗೂ ಶಿಬಿರದ ವರಧಿವಾಚನ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ತಿಳುವಳಿಕೆ ನೀಡುತ್ತಿದ್ದ ಅವರು ನಾನು ಯಾರು? ನನ್ನ ಆಯ್ಕೆ ಏನು? ನಾನು ಗೆಳೆತನ ಯಾರಿಂದ ಮಾಡಬೇಕು? ಎಂಬುದನ್ನು ಅರ್ಥೈಸಿಕೊಳ್ಳಬೇಕು ಚಟಕ್ಕಾಗಿ ದಾರಿ ತಪ್ಪಿದ್ದೇನೆ ಹೊರತು ನನಗೆ ಯಾರೂ ದಾರಿ ತಪ್ಪಿಸಿಲ್ಲಾ ಎಂದು ತಿಳಿದುಕೊಳ್ಳಬೇಕು ಯಾರೇ ಕೊಡಲಿ ಕುಡಿಸಲು ಬರಲಿ ಕುಡಿಯುವದಿಲ್ಲಾವೆಂಬ ಬ್ರೇಕ್ ಹಾಕಿದರೆ ಸಾಕೆಂದರು. ಯಾವುದೇ ವ್ಯಕ್ತಿಯ ಗೆಳೆತನ ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಅವನ ಗುಣ ನಡತೆಯನ್ನು ಅವಲೋಕಿಸಬೇಕು ವಿನಃ ಕಾರಣ ಅಗತ್ಯ ವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಇಂದು ವ್ಯಸನ ಮುಕ್ತರಿಗೆ ಸಿಗುವ ಗೌರವವು ಇಡೀ ಮನೆತನದ ಜೀವನವನ್ನೇ ಬದಲಾವಣೆಯತ್ತ ಕೊಂಡೊಯ್ದು ಶಿಬಿರಾರ್ಥಿಗಳ ಅನಿಸಿಕೆಯಿಂದ ಕಂಡು ಬಂದಿದೆ ಎಂದು 55 ಜನ ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ಜೀವನ ನಡೆಸುತ್ತಿದ್ದನ್ನು ಅರೀತು ಆನಂದ ಬರಿತರಾದರು.
ಇನ್ನೋರ್ವ ಅತಿಥಿ ಶಿಬಿರದ ವ್ಯವಸ್ತಾಪನಾ ಸಮಿತಿಯ ಸದಸ್ಯ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಸಪ್ಟಂಬರ್ 23 ರಿಂದ 30 ರವರೆಗೆ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದಿಂದ ಮದ್ಯವೆಸನಮುಕ್ತರನ್ನಾಗಿ ಮಾಡಲು ಶಿಬಿರಕೈಕೊಂಡಿದ್ದರಲ್ಲ 58 ಜನರಲ್ಲಿ 55 ಜನರು ವ್ಯಸನಿಮುಕ್ತರಾಗಿ ಕುಟುಂಬದೊಂದಿಗೆ ಸಂತಸದ ಜೀವನ ನಡೆಸಿದ್ದಾರೆ ಅವರ ಕುಟುಂಬದವರ ಈ ಹಿಂದಿನ ಇಂದಿನ ಸ್ಥಿತಿಗತಿ ಅವಲೋಕಿಸಿದಾಗ ಜ್ಞಾನಾರ್ಜನೆಯಾಗಿ ಜೀವನವೇ ಹೊಸದಾಗಿ ಮಾರ್ಪಟ್ಟಂತೆ ಕಾಣುತ್ತದೆ ಇದೇ ರೀತಿ ಯುವಕರು ಮಾತಾಪಿತರನ್ನು ಪತ್ನಿ ಮಕ್ಕಳನ್ನು ಗೌರವದಿಂದ ಕಾಣುತ್ತಾ ಜೀವನ ಸಾಗಿಸಿ ÀiÁದರಿಯಾಗಬೇಕೆಂದರು.
ಇನ್ನೋರ್ವ ಜನ ಜಾಗೃತಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ರಾಜೇಶ ಅವರು ಮಾತನಾಡಿ ಮಧ್ಯವೆಸನಿಗಳಿಗೆ ಜೀವನ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿರುವ ಇಲ್ಲಿಯ ವ್ಯವಸ್ಥಾಪನಾ ಸಮಿತಿಯ ಕಾರ್ಯ ಮೆಚ್ಚುವಂತವದ್ದಾಗಿದೆ ಮಧ್ಯವೆಸನ ಮುಕ್ತರಾದ ಶಿಬಿರಾರ್ಥಿಗಳು ನಿಮ್ಮ ಸಂಪನ್ಮೂಲವನ್ನು ನಿವೇ ನಿರ್ಮಾಣಮಾಡಿಕೊಳ್ಳಬೇಕು ಧರ್ಮಸ್ಥಳ ಕ್ಷೇತ್ರಕ್ಕೆ ವ್ಯಸನ ಮುಕ್ತರಾದ ಶಿಬಿರಾರ್ಥಿಗಳನ್ನು ಕರೆದುಕೊಂಡು ಹೋಗಿ ಶ್ರೀ ಕ್ಷೇತ್ರದ ಧರ್ಶನ ಮಾಡಬೇಕೆಂಬ ವಿಚಾರ ನಮ್ಮದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಸದಸ್ಯ ವಾಸುದೇವ ಹೆಬಸೂರ ಅವರು ಮಾತನಾಡಿ ದರ್ಮಸ್ಥಳದಿಂದ ಈ ಹಿಂದೆ ಹಮ್ಮಿಕೊಂಡ ಶಿಭಿರದಿಂದ ಸಮಾಜ ತಿದ್ದುವ ಕಾರ್ಯವಾಗಿದೆ ವ್ಯಸನಮುಕ್ತರಾದ ಯುವಕರು ವ್ಯಸನದ ದಾರಿಯನ್ನೇ ಮರೆತು ಬೇಡಬೇಕೆಂದು ಸರಕಾರ ಕರಕುಶಲಕಾರ್ಮಿಕರಿಗೆ ಉದ್ಯೋಗ ಅವಕಾಶಕ್ಕಾಗಿ ವಿದೇಶಕ್ಕೆ ಕಳುಹಿಸುವ ವ್ಯವಸ್ಥೆ ಕುರಿತು ಪುರಸಭೆಯಿಂದ ಮಾಹಿತಿ ಪಡೆಯಬಹುದಾಗಿದೆ ಎಂದರು.
ಇದೇ ಸಮಯದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ವ್ಯಸನಮುಕ್ತರಾದ 55 ಶಿಬಿರಾರ್ಥಿಗಳು ಉಪಸ್ಥಿತರಿದ್ದರಲ್ಲದೇ ಕೆಲವರು ಶಿಬಿರದಲ್ಲಿಯ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಪುರಸಭಾ ಮಾಜಿ ಉಪಾಧ್ಯಕ್ಷ ಮಾಸುಮಸಾಬ ಕೇಂಭಾವಿ ಪುರಸಭಾ ಸದಸ್ಯ ಮುದಕಣ್ಣ ಬಡಿಗೇರ, ಎಂ.ಎಸ್.ಸರಶೆಟ್ಟಿ, ಮೊದಲಾದವರಿದ್ದರು.
ಶಿಬಿರದ ಖರ್ಚು ವೆಚ್ಚದ ಪಟ್ಟಿಯನ್ನು ತಾಳಿಕೋಟೆ ವಲಯದ ಮೇಲ್ವಿಚಾರಕ ಸಾಯಬಣ್ಣ ಎಸ್.ಕೆ., ಅವರು ಬಿಡುಗಡೆ ಗೊಳಿಸಿದರು.
ಗಣೇಶ ನಗರದ ಮೇಲ್ವಿಚಾರಕಿ ನೇತ್ರಾವತಿ ಎನ್.ಬಿ., ಸೇವಾಪ್ರತಿನಿಧಿಗಳಾದ ಶ್ರೀಮತಿ ದಾನಮ್ಮ ಈಜೇರಿ, ರೇಖಾ ರಾಜಪೂರ, ಅಶ್ವಿನಿ ಪಾಲ್ಕಿ, ಸೌಮ್ಯ ವಿಜಾಪೂರ, ಪರವಿನ ಮುಲ್ಲಾ, ಪದ್ಮಾವತಿ ಬಡಿಗೇರ, ಹಾಗೂ ವ್ಯಸನಮುಕ್ತ ಶಿಬಿರಾರ್ಥಿಗಳ ಪಾಲಕರು ಕುಟುಂಬಸ್ಥರು ಉಪಸ್ಥಿತರಿದ್ದರು.ಸಾಯಬಣ್ಣ ಸ್ವಾಗತಿಸಿ ವಂದಿಸಿದರು.