ಸಂಜೆವಾಣಿ ವಾರ್ತೆ
ಸಂಡೂರು :ಮಾ: 28: ಯಾರಲ್ಲಿ ವಿನಯ ಶ್ರದ್ಧೆ, ಭಕ್ತ ಈ ಮೂರು ಇರುತ್ತದೆಯೋ ಅವನಿಗೆ ದೇವ ಒಲುಮೆ ಖಚಿತವೆಂದು ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ದರಮೇಶ್ವರ ಶ್ರೀಗಳು ಮನದಾಳದ ಮಾತುಗಳನ್ನಾಡಿದರು.
ಅವರು ಸಂಡೂರು ತಾಲೂಕಿನ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಏರ್ಪಡಿಸಿದ್ದ ದ್ಯಾಂಪುರದ ಕವಿ ಕಲ್ಲೀನಾಥ ಶಾಸ್ತ್ರಿ ವಿರಚಿತ 6ನೇ ದಿನದ ಶ್ರೀ ಶರಣಬಸವೇಶ್ವರ ಪುರಾಣದ ಸಾನಿಧ್ಯ ವಹಿಸಿ ಮಾತನಾಡಿದರು. ಅವರು ಮುಂದುವರೆದು 12ನೇ ಶತಮಾನದ ಶಿವಶರಣ ಬಸವಣ್ಣನವರು ಸಮಜ ಉದ್ದಾರದ ಮೂಲಪುರುಷ, ಕಲಬುರ್ಗಿ ಶರಣಬಸವೇಶ್ವರರು ದ್ವಿತೀಯ ಶಂಭು ಎನಿಸಿಕೊಂಡು ಸಮಾಜದ ಮೂಲ ಪುರುಷರಾದರು, ಬಸವಣ್ಣ, ಕಲಬುರ್ಗಿ ಶರಣಬಸವೇಶ್ವರರ ಇಬ್ಬರದು ಒಂದೇ ಗುರಿ ಸಮಾಜದವನ್ನು ಅಂಧಕಾರದಿಂದ ಬೆಳಕಿನತ್ತ ತೆಗೆದುಕೊಂಡು ಹೋಗುವುದು, ಬಸವಣ್ಣನವರಿಗೆ ಜಾತವೇದ ಮುನಿಗಳು ಕಲಬುರ್ಗಿ ಶರಣರಿಗೆ ಮರುಳಾರಾಧ್ಯ ಗುರುಗಳಂಥಹ ಬಲಾಢ್ಯ ಗುರುಗಳು ದೊರೆತದು ವಿಶೇಷ ಕಲಬುರ್ಗಿ ಶರಣಬಸವೇಶ್ವರರಿಗೆ ಸಂಗಮ್ಮ ಮತ್ತು ಮಡಿಯಮ್ಮನವರು ಇಬ್ಬರು ತಾಯಂದಿರು ಮಮತೆಯನ್ನು ಸಂಪಾದಿಸಿದರು. ಸತ್ತು ಹೋದ ಗಂಡನನ್ನು ಬದುಕಿಸಿದ ಅಷ್ಟಪುತ್ರರನ್ನು ಕರುಣಿಸಿದ ಮಹಾ ಮಹಿಮ ಶರಣಬಸವೇಶ್ವರರು ಎಂದು ತಿಳಿಸಿದರು.
ಪಂಡಿತ ಪುಟ್ಟರಾಜ ಗವಾಯಿಗಲ ಸಿಂದಗಿಶಾಂತವೀರ ಪಟ್ಟಾಧ್ಯಕ್ಷರ ಶಿಷ್ಯರಾದ ಬಸವಲಿಂಗಯ್ಯ ಶಾಸ್ತ್ರಿಗಳು ಮಾತನಾಡಿ ಪುರಾಣಗಳಿಂದ ಮಾನಸಿಕ ನೆಮ್ಮದಿ, ಶಾಂತಿ ಸಿಗಲು ಸಾಧ್ಯ, ಪುರಾಣಗಳು ಪುಂಡರ ಗೋಷ್ಠಿಯಾಗದೇ ಮಹಾತ್ಮರ ಚರಿತ್ರೆಯನ್ನು ತಿಳಿದುಕೊಳ್ಳುವುದು ಮುಖ್ಯ, ವಯೋವೃದ್ಧರ ಜೊತೆಗೆ ಈಗಿನ ಯುವ ಪೀಳಿಗೆ , ಯುವಕರು ಪುರಾಣದ ಚಿಂತನೆಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು. ಮಾರು ಶಾಂತಾಪುರ ಗವಾಯಿಗಳು ಅತ್ಯುತ್ತಮ ಸಂಗೀತ ಸೇವೆ ಸಲ್ಲಿಸಿದರು. ಭಂಟನಾನೂರಿನ ಶಿವಕುಮಾರರವರು ತಬಲಾ ಸಾಥ್ ನೀಡಿದರು. ಡಾ. ನಾರಾಯಣ ಹಿರೇಕೊಳಚಿಯವರ ವಯೋಲಿನ್ ವಾದನ ಕೇಳುಗರ ಮನಸ್ಸಿಗೆ ಮುದ ನೀಡಿತು, ಎ.ತಿಪ್ಪೇಸ್ವಾಮಿ ಶಿಕ್ಷಕರು ಚಿತ್ರಿಕಿ ಕುರುಗೋಡಪ್ಪ ಯಶವಂತನಗರ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಿ.ಜಿ. ಕೆಂಚನಗೌಡ, ಭರ್ಮಣ್ಣ, ಮೇಕೆ ಈರಣ್ಣ, ಚಿತ್ರಿಕಿ ಸತೀಶ್, ಚಿತ್ರಿಕಿ ಮೃತ್ಯುಂಜಯಪ್ಪ, ಚಿತ್ರಕಿ ಚಂದ್ರಮೌಳಿ, ನಾಗಲಿಂಪ್ಪ ಪಲ್ಲೇದ್, ಪಲ್ಲೇದ ವೀರಣ್ಣ, ಒಂಟೆ ಶಿವಪ್ಪ, ಎಸ್.ಎಂ. ಮರುಳಸಿದ್ದಯ್ಯ, ಈರಣ್ಣ, ಪಲ್ಲೇದ ನಾಗರತ್ನಮ್ಮ, ದೀಪ ಕಲ್ಪನಾ, ಯರ್ರಯ್ಯನಳ್ಳಿ ನಾಗರತ್ನ, ಚಿತ್ರಿಕಿಸುಮಂಗಲಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಹಲವಾರು ಮಹಾನೀಯರು ಉಪಸ್ಥಿತರಿದ್ದರು.