ವಿನಯ್ ಜಾಮೀನು ಅರ್ಜಿ ವಿಚಾರಣೆ ನಾಳೆ

ಧಾರವಾಡ, ನ 18- ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಪ್ರಕರಣದಲ್ಲಿ ವಿನಯಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿತ್ತು. ಇದೇ ದಿ.23 ರಂದು ಈ ಅವಧಿ ಮುಕ್ತಾಯವಾಗಲಿದ್ದು, ಈ ಮಧ್ಯೆ ವಿನಯ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿನಯ ತನಿಖೆಯನ್ನು ನಡೆಸಿದ್ದ ಸಿಬಿಐ ತನ್ನ ಆಕ್ಷೇಪಣೆಯನ್ನು ನಾಳೆ ಸಲ್ಲಿಸಲಿದೆ. ನಾಳೆ ಈ ಬಗ್ಗೆ ತೀರ್ಮಾನಿಸಿ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಪರಿಶೀಸಲಿದೆ.
ಸಿಬಿಐ ವಿನಯನನ್ನು ಬಂಧಿಸಿ 3 ದಿನಗಳ ಕಾಲ ಹತ್ಯೆ ಪ್ರಕರಣದ ಬಗ್ಗೆ ಸುಧೀರ್ಘ ವಿಚಾರಣೆಯನ್ನು ನಡೆಸಿತ್ತು.