ವಿನಯಕುಮಾರ ಪರ ಮತಯಾಚನೆ

ರಾಯಚೂರು,ಏ.೨೯- ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿನಯಕುಮಾರ ಪರ ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಎ.ರಾಮು ಅವರು ನಗರದ ವಾರ್ಡ್ ನಂ. ೨೧ರ ದೇವಿನಗರದಲ್ಲಿ ಕಾರ್ಯಕರ್ತರ ಜೊತೆ ಮನೆಮನೆಗೆ ಬಿರುಸಿನ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಎ.ರಾಮು ಮಾತನಾಡುತ್ತಾ ಜೆಡಿಎಸ್ ಅಭ್ಯರ್ಥಿ ವಿನಯಕುಮಾರನ್ನು ನಗರದ ಮತದಾರರು ಬೆಂಬಲಿಸಿಸುವುದರ ಜೊತೆಗೆ ಸಂಪೂರ್ಣ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವಿನಯ ಅವರು ಗೆಲವು ಸಾಧಿಸದರೆ ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.