ವಿಧ್ಯಾರ್ಥಿನಿಯರಿಗೆ ಕೊರೊನಾ: ತಹಶೀಲ್ದಾರ್ ಭೇಟಿ

ಲಿಂಗಸುಗೂರು.ಏ.೦೧-ಲಿಂಗಸುಗೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಮಹಿಳೆಯರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕೊರೋನಾ ಪತ್ತೆಯಾಗಿದೆ.ಈಗಾಗಲೇ ಸಾಕಷ್ಟು ವಿದ್ಯಾರ್ಥಿನಿಯರಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ತಿಳಿಸಿದರು.
ತಾಲ್ಲೂಕಿನ ತಹಶೀಲ್ದಾರ್ ನಾಗಪ್ರಸಾದ ಮಾಹಿತಿ ತಿಳಿದು ಪಟ್ಟಣದಲ್ಲಿ ಇರುವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನಿಡಿ ಈ ವಸತಿ ನಿಲಯದಲ್ಲಿ ಇರುವ ಸುಮಾರು ೨೦೦ವಿಧ್ಯಾರ್ಥಿನಿ ನಿಯರು ವಸತಿ ನಿಲಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ವಸತಿ ನಿಲಯದ ಸುತ್ತಾ ಕೊರೋನ ನಿಯಮ ಪ್ರಕಾರ ಸಂಪೂರ್ಣವಾಗಿ ಕಂಟೋನ್ಮೆಂಟ್ ಜೋನ್ ಮಾಡಿ ಎಂದು ಪುರಸಭೆ ಅಧಿಕಾರಿಗಳಿಗೆ ತಹಶೀಲ್ದಾರ್ ನಾಗಪ್ರಸಾದ ಪುರಸಭೆ ಸಿಬ್ಬಂದಿಗಳಿಗೆ ಹೇಳಿದರು..
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ಎಮ್, ನಿಮ್ಮ ವಸತಿ ನಿಲಯದ ವಿಧ್ಯಾರ್ಥಿನಿಯರು ಹೊರಗಡೆ ಯಾರು ಹೊಗಬಾರದು ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೆಳಿದರು. ಇದೆ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ನಮಗೆ ಕಾಲೇಜುಗೆ ಹೊಗಲು ಅನುಮತಿ ನಿಡಿ ಎಂದು ವಿದ್ಯಾರ್ಥಿಗಳು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಮುಂದೆ ಕಣ್ಣಿರು ಸುರಿಸಿದ ಪ್ರಸಂಗ ಈ ಸಂದರ್ಭದಲ್ಲಿ ನಡೆಯಿತು.ವಿಧ್ಯಾರ್ಥಿಗಳ ಹಟಕ್ಕೆ
ಮಣಿಯದ ಅಧಿಕಾರಿಗಳು ಸರ್ಕಾರದ ನಿಯಮ ಪ್ರಕಾರ ಕೊವಿಡ್ ಮಾಹಾಮಾರಿ ರೋಗವನ್ನು ನಿಯಂತ್ರಿಸಲು ನಿವುಗಳು ಸಾಥ್ ನಿಡಬೇಕು.ನಿಮವಿಧ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಯಾಗದಂತೆ ನಿಮ್ಮ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಪ್ರಿನ್ಸಿಪಾಲ್ ರಿಗೆ ಸಂಪೂರ್ಣವಾಗಿ
ಮಾಹಿತಿ ನೀಡುವ ಮೂಲಕ ಕೊವಿಡ್ ನಿಯಮ ಪಾಲಿಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಯಿಂದ ವಿದ್ಯಾರ್ಥಿಗಳಿಗೆ ಕೊರೋನ ಟೆಸ್ಟ್ ಉಚಿತವಾಗಿ ಮಾಡುತ್ತದೆ ನಿವು ಯಾವುದೇ ಭಯಪಡುವ ಅಗತ್ಯವಿಲ್ಲ ಹಾಗೂಪ್ರತಿಯೊಬ್ಬ ವಿದ್ಯಾರ್ಥಿಯನಿಯರು ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಿಕ ಮಾಡಬೇಕು.ವಿದ್ಯಾರ್ಥಿಗಳಿಗೆ ಡಾ.ಅಮರೇಗೌಡ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ವಾರ್ಡ್‌ನ್ ಗಳಾದ ಶರಣಪ್ಪ ಕುಷ್ಟಗಿ ನಾಗರತ್ನಾ ಪುರಸಭೆ ಸಿಬ್ಬಂದಿ ಮಮ್ಮಾಯಿ ವಸತಿ ನಿಲಯದ
ಅಡುಗೆ ಸಿಬ್ಬಂದಿ ಗಳು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಇತರರು ಇದ್ದರು.