ವಿಧ್ಯಾರ್ಥಿಗಳು ಕಲಿಕಾ ಮನೋಭಾವ ಬೆಳೆಸಿಕೊಳ್ಳಿ: ನೀಲಕಂಠಗೌಡ ಪಾಟೀಲ

ಇಂಡಿ:ಎ.1: ವಿಧ್ಯಾರ್ಥಿಗಳು ಶಾಲಾ ಅವಧಿಯಲ್ಲಿ ನಿರಂತರ ಕಲಿಕಾ ಮನೋಭಾವನೆಯನ್ನು ರೂಢಿಸಿಕೊಂಡು ಶಿಕ್ಷಕ ಮತ್ತು ವಿಧ್ಯಾರ್ಥಿಗಳ ಮಧ್ಯ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಎಸ್ ಪಾಟೀಲ ಹೇಳಿದರು.

ಶ್ರೀಶಾಂತೇಶ್ವರ ವಿಧ್ಯಾವರ್ಧಕ ಸಂಘ ಇಂಡಿ ಶ್ರೀಶಾಂತೇಶ್ವರ ಪ.ಪೂ ಕಾಲೇಜ ಮಾಧ್ಯಮಿಕ ವಿಭಾಗದ ಸಭಾ ಭವನದಲ್ಲಿ ಹಮ್ಮಿಕೊಂಡ 2020-21ನೇಸಾಲಿನ ವಿಧ್ಯಾರ್ಥಿಗಳ ಫಲಿತಾಂಶ ಸುಧಾರಣೆ ಹಾಗೂ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪಾಲಕ ಮತ್ತು ಶಿಕ್ಷಕರ ಜವಾಬ್ದಾರಿ ಕೂಡಾ ಪ್ರಮುಖವಾಗಿದೆ ಮಕ್ಕಳು ಪ್ರತಿ ನಿತ್ಯ ಶಾಲೆಗೆ ಬರುವುದರ ಬಗ್ಗೆ ಗಮನ ಹರಿಸಬೇಕು ವಿಧ್ಯಾರ್ಥಿಗಳು ಸಮಯ ಪ್ರಜ್ಞೆ ನಿರಂತರ ಶಾಲೆಗೆ ಬರಬೇಕು. ಶಿಕ್ಷಕರು ಹೇಳಿದ ಪಾಠ ಪ್ರವಚನ ನಿರಂತರ ಗಮನ ಕೊಡಬೇಕು .ಅಂದು ಹೇಳಿರುವ ವಿಷಯ ಅಂದೇ ಮಾಡಿ ಮುಗಿಸಬೇಕು. ಗುರಿ ಹಿಂದೆ ಇದ್ದಾಗ ಗುರು ಇರುತ್ತಾನೆ ಎಂಬ ಪರಿಕಲ್ಪನೆ ಪ್ರತೊಯೋಬ್ಬ ವಿಧ್ಯಾರ್ಥಿಯಲ್ಲಿರಬೇಕು. ವಿಧ್ಯಾರ್ಥಿ ಜೀವನದಲ್ಲಿ 25 ವರ್ಷ ಯಾರೂ ಶ್ರಮ ಪಡುತ್ತಾರೆಯೂ 75 ವರ್ಷ ಐಷಾರಮಿ ಜೀವನ ಸಾಗಿಸಲು ಸಾಧ್ಯೆ. ವಿಧ್ಯಾರ್ಥಿ ಜೀವನ ಕೂಡಾ ಒಂದು ತಪ್ಪಸ್ಸು ಇದ್ದಂತೆ ಯಶಸ್ವೀಯಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ ದೇವರ ವಿಧ್ಯಾರ್ಥಿಗಳ ಬಗ್ಗೆ ಹಿತನುಡಿಗಳನ್ನಾಡಿದರು. ಸಹಕಾರ್ಯದರ್ಶಿ ಎಸ್.ಆರ್ ತಾಂಬೆ, ಇಲಾಖೆ ಅಧಿಕಾರಿ ಸಿ.ಆರ್.ಪಿ ಶ್ರೀಧರ ಹಿಪ್ಪರಗಿ ಇದ್ದರು.
ಶಿಕ್ಷಕ ಪಿ.ಡಿ ತೋಟದ ನಿರೂಪಿಸಿ,ಉಪಪ್ರಾಶುಪಾಲ ಎ.ಪಿ ಬೇರಡ ಸ್ವಾಗತಿಸಿ, ಶಿಕ್ಷಕ ಎಸ್.ಎಸ್
ಕಡಣಿ ವಂದಿಸಿದರು.