ವಿಧಿ 370 ಟ್ರೈಲರ್ ಬಿಡುಗಡೆ

ಜಮ್ಮ ಕಾಶ್ಮೀರ ಜನರ ಬದುಕು ಬವಣೆಯ ಸುತ್ತಾ ಸಾಗುವ ದೇಶ ಪ್ರೇಮವನ್ನು  “ವಿಧಿ 370” ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ. ಶಂಕರ್.

 ಹಿರಿಯ ಸಾಹಿತಿ ದೊಡ್ಡರಂಗೇಗೌಡ ಟ್ರೈಲರ್ ಬಿಡುಗಡೆ‌ ಮಾಡಿ ಶುಭ ಹಾರೈಸಿದರು. ಹಿಂದೂ ಮುಸ್ಲಿಂ‌ ಸಮುದಾಯ ನಡುವೆ ಭಾವೈಕ್ಯತೆ ಮೂಡಿಸುವ ತಿರುಳು ಹೊಂದಿದೆ. ಮಗಳು ರಾಷ್ಟ್ರಪ್ರೇಮಿ ಆದರೆ ಮಗ ರಾಷ್ಟ್ರ  ದ್ರೋಹದ ಕೆಲಸ ಮಾಡುತ್ತಾನೆ. ತಂದೆಯ  ಪಾತ್ರ ಮಾಡಿದ್ದೇನೆ‌ ಎಂದರು.

ಈ ವೇಳೆ ಮಾತಿಗಿಳಿದ  ನಿರ್ದೇಶಕ ಕೆ.ಶಂಕರ್ ಚಿತ್ರವನ್ನು ಮಡಿಕೇರಿ, ಶ್ರವಣಬೆಳಗೊಳ, ರಾಮನಗರ, ಬೆಂಗಳೂರು ಜಮ್ಮು ಕಾಶ್ಮೀರದ  ಶ್ರೀನಗರ , ಪೆಹಲ್ ಗಾಮ್ ,ಗುಲ್ಮಾರ್ಗ್  ಸೇರಿದಂತೆ ವಿವಿಧ ಭಾಗಗಳಲ್ಲಿ 60 ದಿನ ಚಿತ್ರೀಕರಣ ಮಾಡಲಾಗಿದೆ. 370 ಜಾರಿ ಮತ್ತು ರದ್ದಾದ ನಂತರದ ಘಟನೆಗಳು,ಭಾರತೀಯ ಸೈನಿಕರ ಧೈರ್ಯ ಸಾಹಸ, ಕಾಶ್ಮೀರ ಪ್ರೇರಿತ ಪ್ರತ್ಯೇಕತಾವಾಗಿಳಿಗೆ ಸಿನಿಮೀಯ ರೀತಿಯಲ್ಲಿ  ಚಿತ್ರ ಕಟ್ಟಿಕೊಡಲಾಗಿದೆ ಎಂದರು.

ಹಿರಿಯ ನಟಿ ಶೃತಿ ಮಾತನಾಡಿ ಸೈನಿಕನ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೌಟಂಬಿಕ ಸಂಬಂಧಗಳ  ಸುತ್ತ ಚಿತ್ರದ ಕಥೆ ಸಾಗಲಿದೆ.

ಒಳ್ಳೆಯ ಪಾತ್ರ ಸಿಕ್ಕಿದೆ ಚಿತ್ರ ಯಶಸ್ವಿಯಾಗಲಿ ಎಂದು ಹರಸಿದರು. ನಿರ್ಮಾಪಕ ಭರತ್ ,ಡಿಸೆಂಬರ್ 9 ಕ್ಕೆ ಚಿತ್ರ ಬಿಡುಗಡೆಯಾಗಲಿ ಎಲ್ಲರ ಪ್ರೋತ್ಸಾಹ ಸಹಕಾರವಿರಲಿ ಎಂದು

ಕನ್ನಡದ ಕಾಶ್ಮೀರಿ ಪೈಲ್ಸ್ ಆಗಲಿ

ಜಮ್ಮು ಕಾಶ್ಮೀರದ ಬದುಕು ಬವಣೆ ಪ್ರಸ್ತುತ ಪಡಿಸಲಿರುವ “ವಿಧಿ 370 ” ಚಿತ್ರ ಕನ್ನಡದ ಕಾಶ್ಮೀರಿ ಫೈಲ್ಸ್ ಆಗಲಿ ಎಂದು ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ಹರಸಿದರು.

ತಂದೆ ಸೈನಿಕರಾಗಿ ಕರ್ತವ್ಯ ನಿರ್ವಹಿಸಿದವರು. ಅವರ ಕಷ್ಟ ಅರಿವಿದೆ.ವರ್ಷಕ್ಕೆ ಒಮ್ಮೆ ಊರಿಗೆ ಬರುತ್ತಿದ್ದರು. ಅವರು ಅನುಭವಿಸಿದ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು.  ಸೈನಿಕರು, ಜಮ್ಮು ಕಾಶ್ಮೀರದ ಕುರಿತಾದ ವಿಧಿ 370. ನಿರ್ದೇಶಕ  ಶಂಕರ್  ದಶಕಗಳಿಗೂ ಹೆಚ್ಚು ಕಾಲದ ಸ್ನೇಹಿತರು‌.ಅವರ ನಿರ್ದೇಶನದ ಚಿತ್ರ ಕಾಶ್ಮೀರಿ ಪೈಲ್ಸ್ ಗೆ ಒಳ್ಳೆಯದಾಗಲಿ ಎಂದರು.