ವಿಧಾನ ಸಭೆ ಚುನಾವಣೆ : ಮಾದರಿ ನೀತಿ ಸಂಹಿತೆ ಉಲ್ಲಂಘನೆಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಲು ಸೂಚನೆ

ಯಾದಗಿರಿ : ಎ.1 : ವಿಧಾನ ಸಭಾ ಚುನಾವಣೆ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಮಾದರಿ ನೀತಿ ಸಂಹಿತೆ ಪರಿಣಾಮಕಾರಿ ಜಾರಿಗೆಗೆ ನಿಗಾವಹಿಸುವಂತೆ ಜಿಲ್ಲಾ ಪಂಚಾಯತ್‍ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ  ಪಂಚಾಯತ್  ಸಭಾಂಗಣದಲ್ಲಿ ಇಂದು ಚುನಾವಣೆ  ಹಿನ್ನೆಲೆ  ಮಾದರಿ ನೀತಿ ಸಂಹಿತೆ ಕುರಿತು  ಜಿಲ್ಲಾ ಮಟ್ಟದ  ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಧಾನ ಸಭೆ ಚುನಾವಣೆ ಮುಕ್ತ, ನ್ಯಾಯಸಮ್ಮತ ಹಾಗೂ  ಪಾರದರ್ಶಕವಾಗಿ ನಡೆಯಬೇಕು.ಈಗಾಗಲೇ  ಚುನಾವಣೆ ಮಾದರಿನೀತಿ ಸಂಹಿತೆ  ಜಾರಿಯಲ್ಲಿದ್ದು, ನೀತಿ ಸಂಹಿತೆ  ಉಲ್ಲಂಘನೆ ಪ್ರಕರಣಗಳ ಬಗ್ಗೆ  ತೀವ್ರ  ನಿಗಾ  ಇಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 ಈಗಾಗಲೇ ಎಂಸಿಸಿ ತಂಡಗಳನ್ನು ರಚಿಸಲಾಗಿದ್ದು, ತೀವ್ರ ನಿಗಾ ಇಡುವಂತೆ ಸೂಚಿಸಿದ ಅವರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕಂಡು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

 ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ, ಯೋಜನಾ ನಿರ್ದೇಶಕ ಲಕ್ಷ್ಮಣ ಶೃಂಗೇರಿ, ಮುಖ್ಯ ಲೆಕ್ಕಾಧಿಕಾರಿ ಜಯಾಂಬಿಕ , ಜಂಟಿ ಕೃಷಿ ನಿರ್ದೇಶಕ ಅಭಿದ್ ಎಸ್, ಡಿಹೆಚ್‍ಓ ಡಾ. ಗುರುರಾಜ ಹಿರೇಗೌಡ, ಆಯುಷ್ ಅಧಿಕಾರಿ ಡಾ.ವಂದನಾ ಗಾಳಿಯವರ್, ಭೂ ವಿಜ್ಞಾನ ಇಲಾಖೆ  ಯ ಹಿರಿಯ ವಿಜ್ಞಾನಿ ಡಾ.ಪುಷ್ಪಾವತಿ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕ್ರೀಡಾ ಅಧಿಕಾರಿ ರಾಜು ಬಾವಿಹಳ್ಳಿ, ಪಶು ಇಲಾಖೆ ಉಪ ನಿರ್ದೇಶಕ ಡಾ.ರಾಜು ದೇಶಮುಖ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭುದೊರೆ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.