ವಿಧಾನ ಸಭೆಯ ನೂತನ ಸದಸ್ಯರಿಗೆ ಕನ್ನಡ ಕಲಿಕೆ ಪಾಠವಾಗಲಿ : ನಾಲವಾರಕರ್

ಕಲಬುರಗಿ,ಮೇ.23-ರಾಜ್ಯದ 16ನೇ ಕರ್ನಾಟಕ ವಿಧಾನ ಸಭೆಯ ನೂತನ ಸದಸ್ಯರಲ್ಲಿ ಕೆಲವರು ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಕರವೇ ಕಾವಲು ಪಡೆಯ ರಾಜ್ಯ ವಕ್ತಾರರಾದ ಮಂಜುನಾಥ ನಾಲವಾರಕರ್ ಖಂಡಿಸಿದ್ದಾರೆ.
ನೂತನ ಸದಸ್ಯರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಲಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ನಾಲವಾರಕರ್ ಆಗ್ರಹಿಸಿದ್ದಾರೆ.