ವಿಧಾನ ಪರಿಷತ್ ಸದಸ್ಯ ಪಾಟೀಲ್  ತರಾಟೆಗೆ?     


ಸಂಜೆವಾಣಿ ವಾರ್ತೆ 
ಕುಕನೂರು, ಸೆ.23: ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಗೌಡ ಪಾಟೀಲ್ ಅವರನ್ನು ಪದವೀಧರ ಮತದಾರ ಶಿಕ್ಷಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಇತ್ತೀಚೆಗೆ ಜರುಗಿದೆ. ಮಾಜಿ ಎಂ .ಎಲ್.ಸಿ ಶರಣಪ್ಪ ಮಟ್ಟೂರ ಜೊತೆ ಜಿಲ್ಲಾ ಪ್ರವಾಸ ಹಮ್ಮಿಕೊಂಡ       ಸಂದಭ೯ ದಲ್ಲಿ ಯಲಬುರ್ಗಾ ಸಿದ್ದರಾಮೇಶ್ವರ ಪ್ರೌಢ ಶಾಲೆ ಹಾಗೂ ಕುಕನೂರು ಐ ಬೀ ಯಲ್ಲಿ ನಡೆದ ಸಭೆಯಲ್ಲಿ ಅನೇಕ ಜನ ಮತದಾರ ಪಾಟೀಲರನ್ನು ಆಕ್ಷೇಪಿಸಿ, ನೀವು ಗೆದ್ದು ನಾಲ್ಕು ವರುಷ ವಾಗಿದೆ ಒಮ್ಮೆ ಭೇಟಿ ಆಗಿಲ್ಲ, ಪದವೀಧರರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಯೋಚಿಸಿಲ್ಲ ಮುಂದಿನ ವರುಷ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗ ಬಂದ್ರೆ ಹೇಗೆ ಅಂತಾ ಪ್ರಶ್ನೆಗಳ    ಸುರಿಮಳೆ ಹಾಕಿ, ಜನರ ಆಕ್ರೋಶಕ್ಕೆ ಕೆರಳಿದ ಎಂ.ಎಲ್.ಸಿ. ಪಾಟೀಲ್ ಅವರು, ಇಲ್ಲ ನನಗೇನು ತಮ್ಮನ್ನು ಭೇಟಿ ಆಗಬಾರದೆಂಬ ದುರುದ್ದೇಶ ಇದ್ದಿಲ್ಲ. ಕೊರಾನಾ ಮತ್ತಿತರ ಕಾರಣ ಹೇಳಿ ಸಬೂಬು ನೀಡಿದ್ದಾರೆ. ಇದಕ್ಕೆ ಆಸ್ಪದ ಸಿಗಲಿಲ್ಲ. ನಂತರ ಮಾಜಿ ಎಂ.ಎಲ್.ಸಿ. ಮಟ್ಟೂರು ಮಧ್ಯ ಪ್ರವೇಶಿಸಿ, ಜನರನ್ನು  ಸಮಾಧಾನ ಪಡಿಸಿ ಸಭೆ ನಡೆಯಲು ಕೋರಿದರು ಎಂದು ತಿಳಿದು ಬಂದಿದೆ.  ಈ ಸಭೆಯಲ್ಲಿ ಕೆಲವೇ ಜನರಿಗೆ ಆಹ್ವಾನ ನೀಡಿದ್ದರು. ಮತ್ತೊಮ್ಮೆ ಸಭೆ ಸೇರಿ ಎಲ್ಲರಿಗೆ ಸ್ಪಷ್ಟವಾಗಿ ಕಾಣುವುದಾಗಿ ತಿಳಿಸಿದರು.