ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲು ಒತ್ತಾಯ

ಕಲಬುರಗಿ,ಆ.6-ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಿಕಾ ಪರಮೇಶ್ವರ ಖಾನಾಪೂರ, ಶಾಮ್ ನಾಟಿಕಾರ, ವಿಜಯಕುಮಾರ ಜಿ.ರಾಮಕೃಷ್ಣ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ (ಎಂಎಲ್‍ಸಿ), ಲಿಂಗರಾಜ ತಾರಫೈಲ್, ಗೋಪಿಕೃಷ್ಣ ಗುಡ್ಡೆನವರ್, ಪರಶುರಾಮ ನಾಟಿಕಾರ ಅವರನ್ನು ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲು ಶನಿವಾರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ.ನಾಟಿಕಾರ, ಸಂಘಟನಾ ಕಾರ್ಯದರ್ಶಿ ನಾಗರಾಜ ಮುದ್ನಾಳ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗಮ್ಮ ಡಿ.ಕವಳೇಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಮಸ್ಕಿ, ಸುನೀಲ ಜಿ.ಐಹೊಳೆ, ವಿಠಲ ಸಾಗರ, ಅರ್ಜುನ ಕಾಳನೂರ, ಸುದರ್ಶನ ನಂಬಿ, ಗಿರೀಶ ಯಾದಗಿರಿ, ದೇವೇಂದ್ರ ಕವಳೇಕರ, ಕಿಶೋರ ಸಿಂಗಾಡೆ, ದೇವೇಂದ್ರ ಚಿಗನೂರ ಅವರು ಮನವಿಪತ್ರ ಸಲ್ಲಿಸಿ ಚಂದ್ರಿಕಾ ಪರಮೇಶ್ವರ, ಶಾಮ್ ನಾಟಿಕಾರ, ವಿಜಯಕುಮಾರ ಜಿ.ರಾಮಕೃಷ್ಣ, ಲಿಂಗರಾಜ ತಾರಫೈಲ್, ಗೋಪಿಕೃಷ್ಣ ಗುಡ್ಡೆನವರ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದಾರೆ. ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮತ್ತು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ರಾಜಕೀಯವಾಗಿ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.