ವಿಧಾನ ಪರಿಷತ್ ಚುನಾವಣೆ 91ಸ್ಥಳಗಳಲ್ಲಿ ಕಟ್ಟೆಚ್ಚರ : ಡಿವೈಎಸ್ಪಿ. ಶ್ರೀಧರ ದೊಡ್ಡಿ

ಇಂಡಿ: ಡಿ.9:ದಿನಾಂಕ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ನಿಮಿತ್ಯವಾಗಿ ಜಿಲ್ಲಾ ಪೊಲೀಸ ವರೀಷ್ಠಾಧಿಕಾರಿಯ ಆದೇಶದಂತೆ ಇಂಡಿ ಪೊಲೀಸ ಉಪ ವಿಭಾಗಾಧಿಕಾರಿ ಶ್ರೀಧರ ದೊಡ್ಡಿ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಇಂಡಿ ಶಹರ, ಹಾಗೂ ಇಂಡಿ ಗ್ರಾಮೀಣ ,ಸಿಂದಗಿ, ಚಡಚಣ, ಈ ಮೂರು ಸರ್ಕಲ್ ಗಳಲ್ಲಿ ಒಟ್ಟು 91 ಸ್ಥಳಗಳಲ್ಲಿ 1690 ಚುನಾಯಿತ ಪ್ರತಿನಿಧಿಗಳಿಂದ ಮತದಾನ ಮಾಡಲು ಸಿದ್ದಪಡಿಸಲಾಗಿದೆ. ಇದರಲ್ಲಿ 18 ಅತಿ ಸೂಕ್ಷ್ಮಸ್ಥಳಗಳು, 30 ಸೂಕ್ಷ್ಮ ಸ್ಥಳಗಳು, 30 ಸಾಮಾನ್ಯ ಸ್ಥಳಗಳು ಎಂದು ಗರುತಿಸಲಾಗಿದೆ. ಗುರುತ್ತಿಸಿದ ಸ್ಥಳಗಳಲ್ಲಿ 4 ಜನ ಸಿ,ಪಿ,ಆಯ್, ಸಿಬ್ಬಂದಿಗಳು, 8ಜನ ಪಿ,ಎಸ್,ಆಯ್, ಸಿಬ್ಬಂದಿಗಳು, 24 ಎ,ಎಸ್,ಆಯ್, ಸಿಬ್ಬಂದಿಗಳು, 71ಜನ ಎಸಿ ಗಳು, 166 ಜನ ಪೊಲೀಸ ಸಿಬ್ಬಂಧಿಗಳನ್ನು ಆಯೋಜನೆ ಮಾಡಲಾಗಿದೆ. ಭೂತ ಕರ್ತವ್ಯಕ್ಕೆ, ಮೂಬಾಯಿಲ್ ಕರ್ತವ್ಯಕ್ಕೆ, ಭದ್ರತೆಗೋಸ್ಕರ ನಿಯೋಜೆನೆ ಮಾಡಲಾಗಿದೆ. ಹಾಗೂ ಕೆ,ಎಸ್,ಆರ್,ಪಿ 3 ವಾಹಾನಗಳು ಮತ್ತು ಡಿ,ಆರ್,ದ 2 ವಾಹಾನಗಳು ಒಂದು ವಾಹನದಲ್ಲಿ ಕನೀಷ್ಠ 28ಜನ ಪೊಲೀಸ ಸಿಬ್ಬಂದಿಗಳನ್ನು ಹೋಂದಿರುತ್ತಾರೆ ಎಂದು ಅವರು ತಿಳಿಸಿದರು. ಇದು ಅಲ್ಲದೆ ತಮ್ಮ ಉಪ ವಿಭಾಗದಲ್ಲಿ 12 ಸ್ಥಳಗಳಲ್ಲಿ 112 ನಿರಂತರ ಸೇವೆ ಸಲ್ಲಿಸಿತ್ತಿವೆ. ಯಾವುದೆ ರೀತಿ ಗಲಭೆಗಳಿಗೆ ಅವಕಾಶ ಇರುವುದಿಲ್ಲ ಹಾಗೆನಾದರು ಕಂಡು ಬಂದರೆ ಕ್ಷಣಾರ್ದದಲ್ಲಿ ಅವರನ್ನು ಹಿಡಿದು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 112 ವಾಹನದ ಬಗ್ಗೆ ಜನರಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕಾಗಿದೆ. ಮಧ್ಯರಾತ್ರಿಯಲ್ಲಿ ಕಳ್ಳತನ ಅಥವಾ ಕೊಲೆಯಾದರೆ, ಅಪಘಾತ ಸಂಬಂದಿಸಿದರೆ, ಯಾವುದೆ ರೀತಿ ಅಹಿತಕರ ಘಟನೆ ಸಂಬವಿಸಿದರೆ ಪೊಲೀಸ ಠಾಣೆಗೆ ಬಂದು ಪಿರ್ಯಾದಿ ದಾಖಲಿಸುವ ಬದಲು ಸ್ಥಳದಲ್ಲೆ ನಿಂತು 112ಗೆ ಕರೆ ಮಾಡಿದರೆ ಸಾಕು ಘಟನಾ ಸ್ಥಳಕ್ಕೆ ಪೊಲೀಸ ಸಿಬ್ಬಂದಿಯೋಂದಿಗೆ ಆಗಮಿಸುತ್ತದೆ ಎಂದು ಅವರು ಹೇಳೀದರು. ಅವಶ್ಯಕತೆ ಇದ್ದಲ್ಲಿ ಈ ಪೋನ ನಂಬರಿಗೆ ಕರೆ ಮಾಡಬಹುದು 9480804222.