ವಿಧಾನ ಪರಿಷತ್ ಚುನಾವಣೆಃ ಎಲ್ಲಿ ಮತದಾರರು ಇಲ್ಲವೋ ಅಲ್ಲಿ ಮತಗಟ್ಟೆಗಳ ಸಂಖ್ಯೆ ನಮೂದಿಸುವುದು ಅವಶ್ಯ ಇಲ್ಲಃ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್

ವಿಜಯಪುರ, ನ.21-ಬಿಜಾಪೂರ-ಬಾಗಲಕೋಟ ವಿಧಾನ ಪರಿಷತ್ ಚುನಾವಣೆಯಲ್ಲಿ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಎಲ್ಲಿ ಮತದಾರರ ಇಲ್ಲವೊ (ಉದಾಹರಣೆಗಾಗಿ, ವಿಜಯಪುರ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಜಿ.ಪಂ) ಅಲ್ಲಿ ಮತಗಟ್ಟೆಗಳ ನಂಬರಗಳನ್ನು ಹಾಕುವುದಿಲ್ಲ. ಇದರಿಂದಾಗಿ ಮತಗಟ್ಟೆಗಳ ಕ್ರಮ ಸಂಖ್ಯೆಗಳಲ್ಲಿ ಬದಲಾವಣೆ ಆಗುತ್ತವೆ. ಅದರಂತೆ ಪರಿಷ್ಕೃತ ಮತಗಟ್ಟೆ ಯಾದಿಯನ್ನು ತಯಾರಿಸಿದ್ದು, ಇದೇ ಯಾದಿಯನ್ನು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಬಿಜಾಪೂರ-ಬಾಗಲಕೋಟ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಿ ಮತದಾರರು ಇಲ್ಲವೋ ಅಲ್ಲಿ ಮತಗಟ್ಟೆಗಳ ಸಂಖ್ಯೆ ನಮೂದಿಸುವುದು ಅವಶ್ಯ ಇರುವುದಿಲ್ಲ. ಕಾರಣ, ಈ ಮತಗಟ್ಟೆಗಳಿಗೆ ಸಂಖ್ಯೆ ನೀಡದೇ ಪರಿಷ್ಕøತ ಮತಗಟ್ಟೆಯನ್ನು ಯಾದಿಯನ್ನು ತಯಾರಿಸಿ ಸಲ್ಲಿಸಲು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ತಿಳಿಸಲಾಗಿರುತ್ತದೆ.
ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಇವರು ಪ್ರತಿ ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆ ವಾರು ಒಂದು ಮತಗಟ್ಟೆಯನ್ನು ಸ್ಥಾಪಿಸಲು ನಿರ್ದೇಶಿಸಿದ ಪ್ರಕಾರ ಅವಳಿ ಜಲ್ಲೆಯ ಎಲ್ಲ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮತಗಟ್ಟೆ ಸಂಖ್ಯೆ ನೀಡಿ, ಸದರಿ ಮತಗಟ್ಟೆ ಯಾದಿಯನ್ನು ಮಾನ್ಯ ಚುನಾವಣಾ ಆಯೋಗದ ಅನುಮೋದನೆಗಾಗಿ ಸಲ್ಲಿಸಲಾಗಿತ್ತು.
ಆದರೆ ಪ್ರಸ್ತುತ ಚುನಾವಣೆಯಲ್ಲಿ ಎಲ್ಲಿ ಮತದಾರರ ಇಲ್ಲವೋ ಅಲ್ಲಿ ಮತಗಟ್ಟೆಗಳ ಸಂಖ್ಯೆ ನಮೂದಿಸುವುದು ಅವಶ್ಯ ಇರುವುದಿಲ್ಲ. ಕಾರಣ, ಸದರಿ ಮತಗಟ್ಟೆಗಳಿಗೆ ಸಂಖ್ಯೆ ನೀಡದೇ ಪರಿಷ್ಕøತ ಮತಗಟ್ಟೆಯನ್ನು ಯಾದಿಯನ್ನು ತಯಾರಿಸಿ ಸಲ್ಲಿಸಲು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ತಿಳಿಸಲಾಗಿರುತ್ತದೆ.
ಕಾರಣ, ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಎಲ್ಲಿ ಮತದಾರರ ಇಲ್ಲವೊ, ಅಲ್ಲಿ ಮತಗಟ್ಟೆಗಳ ನಂಬರಗಳನ್ನು ಹಾಕುವುದಿಲ್ಲ. ಇದರಿಂದಾಗಿ ಮತಗಟ್ಟೆಗಳ ಕ್ರಮ ಸಂಖ್ಯೆಗಳಲ್ಲಿ ಬದಲಾವಣೆ ಆಗುತ್ತವೆ. ಅದರಂತೆ ಪರಿಷ್ಕೃತ ಮತಗಟ್ಟೆ ಯಾದಿಯನ್ನು ತಯಾರಿಸಿದ್ದು, ಇದೇ ಯಾದಿಯನ್ನು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ದಿನಾಂಕ:12-11-2021 ರಂದು 03-ವಿಜಯಪುರ ವಿಧಾನ ಪರಿಷತ್ತ ಸ್ಥಳೀಯ ಸಂಸ್ಥೆ ಚುನಾವಣೆ – 2021 ರ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿರುತ್ತದೆ. ಈ ಕರಡು ಮತದಾರರ ಪಟ್ಟಿಯ ಮೇಲೆ ಏನಾದರೂ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:18-11-2021 ರೊಳಗಾಗಿ ಸಲ್ಲಿಸಲು ತಿಳಿಸಿದಂತೆ, ಬಾಗಲಕೋಟೆ ಜಿಲ್ಲೆಯ ಒಟ್ಟು 02 ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ.
ನಿಗದಿತ ಅವಧಿಯೊಳಗೆ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ, ನಾಮ ಪತ್ರ ಸ್ವೀಕೃತಿ ಕೊನೆಯ ದಿನಾಂಕದ ಮೊದಲು ಆಯಾ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚುರಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬಿಜಾಪೂರ ಬಾಗಲಕೋಟ ವಿಧಾನಪರಿಷತ್ ಚುನಾವಣೆಗೆ ಸಂಬಂಧಪಟ್ಟಂತೆ ದಿನಾಂಕ:12-11-2021 ರಂದು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಇ-ಮೇಲ್ ಮುಖಾಂತರ ಸ್ವೀಕೃತವಾದ ನಾಮಪತ್ರದ ನಮೂನೆ 2ಇ ಯಲ್ಲಿ (ಕನ್ನಡ) ಭಾಗ 1 ರಲ್ಲಿ “ನಾನು ————-ವರ್ಷಗಳಷ್ಟು ವಯಸ್ಸನ್ನು ಪೂರೈಸಿದ್ದೇನೆ” ಎಂಬ ಅಂಶ ನಮೂದು ಇರುವುದಿಲ್ಲ. ಆದ್ದರಿಂದ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಇಂದು ದಿನಾಂಕ:19-11-2021 ರಂದು ಇ-ಮೇಲ್ ಮುಖಾಂತರ ಸ್ವೀಕೃತವಾದ ಪರಿಷ್ಕøತ ನಾಮಪತ್ರದ ನಮೂನೆ ನಮೂನೆ 2ಇ ಯಲ್ಲಿ (ಕನ್ನಡ) ಭಾಗ 1 ರ ಕ್ರಮಾಂಕ (2) ರಲ್ಲಿ “ನಾನು——— ವರ್ಷಗಳಷ್ಟು ವಯಸ್ಸನ್ನು ಪೂರೈಸಿದ್ದೇನೆ” ಎಂಬ ಅಂಶ ನಮೂದು ಮಾಡಲಾಗಿರುತ್ತದೆ.ಕಾರಣ, ಪ್ರಸ್ತುತ 03-ವಿಜಯಪುರ ವಿಧಾನ ಪರಿಷತ್ತ ಸ್ಥಳೀಯ ಸಂಸ್ಥೆ ಚುನಾವಣೆ -2021 ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವವರು ಸದರಿ ಪರಿಷ್ಕೃತ ನಾಮಪತ್ರದ ನಮೂನೆ ನಮೂನೆ 2ಇ ಯಲ್ಲಿ ನಾಮಪತ್ರ ಸಲ್ಲಿಸಬೇಕೆಂದು ಹಾಗೂ ಸದರಿ ಪರಿಷ್ಕೃತ ನಾಮಪತ್ರದ ನಮೂನೆಯನ್ನು ಚುನಾವಣಾಧಿಕಾರಿಗಳು 03-ವಿಜಯಪುರ ವಿಧಾನ ಪರಿಷತ್ತ ಸ್ಥಳೀಯ ಸಂಸ್ಥೆ ಚುನಾವಣೆ -2021 ಹಾಗೂ ಜಿಲ್ಲಾಧಿಕಾರಿಗಳ ವಿಜಯಪುರ ಇವರ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳು ಬಾಗಲಕೋಟ ಇವರ ಕಛೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ದಿನಾಂಕ:09-11-2021 ರ ಪ್ರಕಾರ 03-ವಿಜಯಪುರ ವಿಧಾನ ಪರಿಷತ್ತ ಸ್ಥಳೀಯ ಸಂಸ್ಥೆ ಚುನಾವಣಿ -2021 ರ ಘೋಷಿಸಿ ವೇಳಾಪಟ್ಟಿ ಹೊರಡಿಸಿರುತ್ತಾರೆ. ಅದರಂತೆ, ದಿನಾಂಕ:16-11-2021 ರಿಂದ ನಾಮಪತ್ರ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.
ಇನ್ನು ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಹಾಗೂ ಪ್ರಚಾರ ಸಂದರ್ಭಗಳಲ್ಲಿ ಚುನಾವಣಾ ಆಯೋಗದ ಕೋವಿಡ್ ಮಾರ್ಗಸೂಚಿಗಳನ್ನು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಶ್ರೀ ಚೋರಗಸ್ತಿ, ಶ್ರೀ ಹಾದಿಮನಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.