ವಿಧಾನ ಪರಿಷತ್ ಚುನಾವಣೆಃ ಎರಡು ಜಿಲ್ಲೆಗಳಲ್ಲಿ ಸಕಲ ಸಿದ್ಧತೆಃ ಪಿ. ಸುನೀಲ್ ಕುಮಾರ್

ವಿಜಯಪುರ, ಡಿ.9-ವಿಧಾನ ಪರಿಷತ್ 03-ಬಿಜಾಪುರ, ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಎರಡು ಜಿಲ್ಲೆಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ. ಸುನೀಲ್ ಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಟ್ಟು ನಾಲ್ಕು 411 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆಗೆ ಎರಡು ಜಿಲ್ಲೆ ಸೇರಿ ಒಟ್ಟು 38 ಸೆಕ್ಟರ್ ಅಧಿಕಾರಿಗಳು, 22 ಫ್ಲಾಯಿಂಗ್ ಸ್ಕ್ವಾಡ್, 22 ವಿಡಿಯೋ ಸರ್ವಲೈನ್ಸ್ ತಂಡಗಳು, 2 ಜಿಲ್ಲಾ ತರಬೇತಿದಾರರು, 44 ತಾಲೂಕು ಮಟ್ಟದ ತರಬೇತುದಾರರನ್ನು ನೇಮಿಸಲಾಗಿರುತ್ತದೆ. ಒಟ್ಟು ಒಂದು ಅಂಚೆ ಮತಪತ್ರವನ್ನು ನೀಡಲಾಗಿರುತ್ತದೆ ಎಂದು ಹೇಳಿದರು.
ಅದರಂತೆ ಆಯಾ ನಗರ ಗ್ರಾಮೀಣ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ, ಆಯುಕ್ತರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮತದಾರರಿಗೆ ಮತದಾನದ ವಿಧಾನದ ಬಗ್ಗೆ ಸೂಕ್ತ ತರಬೇತಿಯನ್ನು ನೀಡಲಾಗಿರುತ್ತದೆ.
ಒಟ್ಟು 948 ಮತದಾರರಿಂದ ಸಂಗಡಿಗಾರ, ಸಹಾಯಕರನ್ನು ನೀಡಲು ಕೋರಿ (ಕಂಪ್ಯಾನಿಯನ್) ಅರ್ಜಿ ಸಲ್ಲಿಸಿದ್ದು, ಅದರಂತೆ ನಿಯಮಾನುಸಾರ ಕ್ರಮ ವಹಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ಎಂದು ಅವರು ತಿಳಿಸಿದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್‍ನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಮಾಡಲಾಗುತ್ತದೆ. ತದನಂತರ ಆಯಾ ತಾಲೂಕಿನಲ್ಲಿ ಡಿ ಮಸ್ಟರಿಂಗ್ ಕೇಂದ್ರದಿಂದ ತಹಸಿಲ್ದಾರ್ ಮೇಲ್ವಿಚಾರಣೆಯಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ಮತದಾನವಾದ ಮತಪೆಟ್ಟಿಗೆಗಳನ್ನು ವಿಜಯಪುರದ ದರ್ಬಾರ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿ ತರಲಾಗುತ್ತದೆ. ವಿಜಯಪುರ ನಗರದ ವಿಬಿ ದರಬಾರ್ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.