
ಬಳ್ಳಾರಿ,ಮೇ 11- ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಎಫ್‍ಎಸ್‍ಟಿ ತಂಡ ಹಾಗೂ ಪೊಲೀಸ್ ಇಲಾಖೆ ತಪಾಸಣೆ ವೇಳೆ ಮಂಗಳವಾರದಂದು ಸೂಕ್ತ ದಾಖಲೆಯಿಲ್ಲದ 15,20,560 ರೂ. ಮೊತ್ತದ ನಗದು ಮತ್ತು ಅನಧಿಕೃತವಾಗಿ ಸಾಗಿಸುತ್ತಿದ್ದ 88,371 ರೂ. ಮೌಲ್ಯದ 177.68 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡವು ತಪಾಸಣೆ ವೇಳೆ 8,88,060 ರೂ. ಮೊತ್ತದ ನಗದು ಹಾಗೂ ಪೋಲೀಸ್ ಇಲಾಖೆ ತಪಾಸಣೆ ವೇಳೆ 6,40,500 ರೂ. ನಗದು ಸೇರಿದಂತೆ ಒಟ್ಟು 15,20,560 ರೂ. ಮೊತ್ತದ ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಿಂದ 4,512 ರೂ. ಮೌಲ್ಯದ 5.40 ಲೀಟರ್ ಮದ್ಯ ಹಾಗೂ ಪೋಲೀಸ್ ಇಲಾಖೆಯಿಂದ 83,859 ರೂ. ಮೌಲ್ಯದ 172.28 ಲೀಟರ್ ಮದ್ಯ ಸೇರಿದಂತೆ ಒಟ್ಟು 88,837 ರೂ. ಮೌಲ್ಯದ 177.68 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.