
ಕಲಬುರಗಿ.ಮಾ.23:ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಕಲಬುರಗಿ (ಉತ್ತರ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೆಳಕಂಡ ಮತಗಟ್ಟೆಗಳ ಸ್ಥಳವನ್ನು ಹಾಗೂ ಹೆಸರನ್ನು ವಿವಿಧ ಕಾರಣಗಳಿಂದ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಮತದಾರರು ಇದನ್ನು ಗಮನಿಸಬೇಕೆಂದು 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಆದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬದಲಾವಣೆಯಾದ ಮತಗಟ್ಟೆಗಳ ವಿವರ ಇಂತಿದೆ. ಕಲಬುರಗಿ ಫಿಟ್ಟರ್ ಬೆಡ್‍ನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ-86 ಹಾಗೂ 87ನ್ನು ಕಲಬುರಗಿಯ ಶಹಾಬಜಾರ ಫಿಲ್ಟರ್‍ಬೆಡ್ ಜಿಡಿಎ ಕಾಲೋನಿಯಲ್ಲಿನ ಮಹರ್ಷಿ ವೈಶ್ಯ ಹೈಯರ್ ಪ್ರೈಮರಿ ಕನ್ನಡ ಮಾಧ್ಯಮ ಶಾಲೆಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ರಾಜೀವಗಾಂಧಿ ನಗರದ ಚೇತಕ ಕನ್ನಡ ಹೆಚ್.ಪಿ.ಎಸ್. ಶಾಲೆಯಲ್ಲಿನ (ಮೂರನೇ ತರಗತಿಯ ರೂಮ್) ಮತಗಟ್ಟೆ ಸಂಖ್ಯೆ-93ನ್ನು ಕಲಬುರಗಿಯ ತಾಜ್ ಸುಲ್ತಾನಪುರ ರಸ್ತೆಯ ನಿಸರ್ಗ ಪಬ್ಲಿಕ್ ಶಾಲೆಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ರಾಜೀವಗಾಂಧಿ ನಗರದ ಚೇತಕ ಕನ್ನಡ ಹೆಚ್.ಪಿ.ಎಸ್. ಶಾಲೆ (ಒಂದನೇ ತರಗತಿಯ ರೂಮ್)ಯಲ್ಲಿನ ಮತಗಟ್ಟೆ ಸಂಖ್ಯೆ-94ನ್ನು ಕಲಬುರಗಿಯ ತಾಜ್ ಸುಲ್ತಾನಪುರ ರಸ್ತೆಯ ನಿಸರ್ಗ ಪಬ್ಲಿಕ್ ಶಾಲೆಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ನೆಹರು ಗಂಜ್‍ನ ನಂದಿ ಕಾಲೋನಿಯಲ್ಲಿನ ಮಹಾತ್ಮ ಬಸವೇಶ್ವರ ಹೈಸ್ಕೂಲ್ (ಹಳೆಯ ಬಿಲ್ಡಿಂಗ್) ದಲ್ಲಿರುವ ಮತಗಟ್ಟೆ ಸಂಖ್ಯೆ-102 ಹಾಗೂ 103ನ್ನು ಕಲಬುರಗಿ ಶಿವಾಜಿನಗರದ ಭರತ ಎಜ್ಯುಕೇಶನಲ್ ಸೊಸೈಟಿಯ ಹೈಯರ್ ಪ್ರೈಮೇರಿ ಹಾಗೂ ಸೆಕೆಂಡರಿ ಹೈಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯ ಗುಲ್ಶನ್-ಎ-ಅರಫಾತ್ ಕಾಲೋನಿಯ ದಿ ಲಿಮಿರಾ ಅಕಾಡೆಮಿ ಹೈಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ-118 ಹಾಗೂ 119ನ್ನು ಕಲಬುರಗಿಯ ಅರಫಾತ್ ಕಾಲೋನಿಯ ಹೀರಾ ಪಬ್ಲಿಕ್ ಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯ ನೂರಾನಿ ಮೊಹಲ್ಲಾ ರೋಜಾದ ಫಾತೀಮಾ ನರ್ಸರಿ ಹೈಯರ್ ಪ್ರೈಮೇರಿ ಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 126ನ್ನು ಕಲಬುರಗಿಯ ನೂರಾನಿ ಮೊಹಲ್ಲಾ ರೋಜಾದ ನೂರೇ ಪಬ್ಲಿಕ್ ಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯ ನ್ಯೂ ರಾಘವೇಂದ್ರ ಕಾಲೋನಿಯ ದತ್ತಾತ್ರೇಯ ಹೇರೂರ ಸ್ಮಾರಕ ಹೈಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 186 ಹಾಗೂ 187ನ್ನು ಕಲಬುರಗಿಯ ರಾಯಲ್ ಇಂಗ್ಲೀಷ್ ಮಿಡಿಯಂ ಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯ ಮುಕ್ತಂಪೂರದÀ ಭವಾನಿ ನಗರದ ಶ್ರೀ ಹಿಂಗುಲಾಂಬಿಕಾ ಹೈಯರ್ ಪ್ರೈಮೆರಿ ಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 201ನ್ನು ಕಲಬುರಗಿಯ ಹಪ್ತ ಗುಮ್ಮಜ್ (ಕೆ) ಸರ್ಕಾರಿ ಹೈಯರ್ ಪ್ರೈಮೆರಿ ಮರಾಠಿ ಮಿಡಿಯಂ ಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯ ಖುನಿ ಅಲಾವಾ ಮೋಮಿನಪುರಾ(ಬಿ) ಆಕ್ಸ್‍ಫರ್ಡ್ ಅಕಾಡೆಮಿಯ ನರ್ಸರಿ ಮತ್ತು ಹೈಯರ್ ಪ್ರೈಮೇರಿ ಇಂಗ್ಲೀಷ್ ಮಿಡಿಯಂ ಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 206ನ್ನು ಕಲಬುರಗಿ ಮೋಮಿನಪುರಾದ ಬಾತಲಿವಾಲಾ ಆಲ್ ಆಮೀನ್ ಉರ್ದು ಶಾಲೆಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ನ್ಯೂ ರೋಜಾ ಬಿಲ್ಡಿಂಗ್ ನೂರಾನಿ ಮೊಹಲ್ಲಾದ ಎ.ಎನ್. ಅಂಬಲಗಿ ಮೆಮೊರಿಯಲ್ ನರ್ಸರಿ ಹಾಗೂ ಪ್ರೈಮೇರಿ ಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 231ನ್ನು ಕಲಬುರಗಿ ಖಾಜಾ ಕಾಲೋನಿಯ ಟಿನ್ನಿ ಪಲ್ಸ್ ಹೈಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ಮುಕ್ತಂಪುರದ ಸಂತ್ರಾಸ್‍ವಾಡಿಯ ಡಿವೈನ್ ನರ್ಸರಿ ಆಂಡ್ ಹೈಯರ್ ಪ್ರೈಮೆರಿ ಇಂಗ್ಲೀಷ್ ಮಿಡಿಯಂ ಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 277 ಹಾಗೂ 278ನ್ನು ಕಲಬುರಗಿಯ ಮುಕ್ತಂಪುರದ ಸೈಯದ್ ಅಕ್ಬರ್ ಹುಸೇನಿ ಇಂಗ್ಲೀಷ್ ಮಿಡಿಯಂ ಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ಶಹಾಬಜಾರ ಆಳಂದ ಕಾಲೋನಿಯಲ್ಲಿನ ಅಧೀಕ್ಷಕರು, ರಾಜ್ಯ ಮಹಿಳಾ ವಸತಿ ನಿಲಯದಲ್ಲಿನ ಮತಗಟ್ಟೆ ಸಂಖ್ಯೆ 43 ಹಾಗೂ 44ನ್ನು ಕಲಬುರಗಿ ಶಹಾಬಜಾರ ಆಳಂದ ಕಾಲೋನಿಯಲ್ಲಿನ ಅಧೀಕ್ಷಕರು, ರಾಜ್ಯ ಮಹಿಳಾ ವಸತಿ ನಿಲಯದ ಕಚೇರಿಯ ನ್ಯೂ ಬಿಲ್ಡಿಂಗ್ ರೂಮ್‍ಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ರೋಜಾದ ಖಾಜಾ ಕಾಲೋನಿಯ ಬಿಬಿ ರಜಾ ಗಲ್ರ್ಸ್ ಹೈಸ್ಕೂಲ್‍ದಲ್ಲಿನ ಮತಗಟ್ಟೆ ಸಂಖ್ಯೆ 133 ಹಾಗೂ 148ನ್ನು ಕಲಬುರಗಿಯ ಕೆ.ಬಿ.ಎನ್. ಯುನಿವರ್ಸಿಟಿಯ ಬಿ.ಎಡ್. ಕಾಲೇಜಿಗೆ ಸ್ಥಳಾಂತರಿಸಲಾಗಿದೆ.