
ಕಲಬುರಗಿ,ಏ.13:ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 5 ಜನ ಐ.ಎ.ಎಸ್. ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಕ ಮಾಡಿ ನಿಯೋಜಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರಿಗೆ ಹಂಚಿಕೆ ಮಾಡಿದ ವಿಧಾನಸಭಾ ಮತಕ್ಷೇತ್ರ, ವಾಸಸ್ಥಳ ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ.
34-ಅಫಜಲಪುರ ಮತ್ತು 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಸಿ. ಸುದರ್ಶನ ರೆಡ್ಡಿ, ಐವಾನ್ ಶಾಹಿ ಹಳೆಯ ಅತಿಥಿ ಗೃಹ ಕೋಣೆ ಸಂಖ್ಯೆ-1 ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 7032662937.
40-ಚಿತ್ತಾಪುರ ಹಾಗೂ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಮನೋಜ ಖಟ್ರಿ, ಐವಾನ್ ಶಾಹಿ ಹಳೆಯ ಅತಿಥಿ ಗೃಹ ಕೋಣೆ ಸಂಖ್ಯೆ-4 ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9425859477.
41-ಸೇಡಂ ಹಾಗೂ 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಇಸ್ರೇಲ್ ವಾಟ್ರೇ ಇಂಗಟಿ, ಐವಾನ್ ಶಾಹಿ ಹಳೆಯ ಅತಿಥಿ ಗೃಹ ಕೋಣೆ ಸಂಖ್ಯೆ-2 ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9774969926.
44-ಗುಲಬರ್ಗಾ (ದಕ್ಷಿಣ) ಹಾಗೂ 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ: ಎಸ್. ಜಯಂದಿ, ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9442007447.
46-ಆಳಂದ ವಿಧಾನಸಭಾ ಕ್ಷೇತ್ರ: ಮಿತಿಲೇಶ್ ಮಿಶ್ರಾ, ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9801683670.