ವಿಧಾನಸಭೆ ಚುನಾವಣೆ: ಪೋಲಿಸ್ ವೀಕ್ಷಕರ ಆಗಮನ

ಕಲಬುರಗಿ,ಏ.29:ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆಗೆ ಐ.ಪಿ.ಎಸ್. ಅಧಿಕಾರಿ ಮನೋಜ ಕೌಶಿಕ್ ಅವರನ್ನು ಪೋಲಿಸ್ ವೀಕ್ಷಕರನ್ನಾಗಿ ನೇಮಕ ಮಾಡಿ ನಿಯೋಜಿಸಿದ್ದು, ವೀಕ್ಷಕರು ಈಗಾಗಲೆ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಎಸ್.ಪಿ.ಇಶಾ ಪಂತ್ ತಿಳಿಸಿದ್ದಾರೆ.

ಪೋಲಿಸ್ ವೀಕ್ಷಕರು ಕಲಬುರಗಿ ನಗರದ ಹಳೇ ಐವಾನ್-ಎ-ಶಾಹಿ ಅತಿಥಿಗೃಹದ ಕೋಣೆ ಸಂ.4ರಲ್ಲಿ ತಂಗಿದ್ದು, ಚುನಾವಣೆಯ ಕಾನೂನು ಸುವ್ಯಸ್ಥೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಏನೇ ದೂರುಗಳಿದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪೋಲಿಸ್ ವೀಕ್ಷಕರನ್ನು ಕಂಡು ದೂರು ಸಲ್ಲಿಸಬಹುದಾಗಿದೆ.