ವಿಧಾನಸಭೆ ಚುನಾವಣೆ: ಚುನಾವಣಾ ವೆಚ್ಚ ವೀಕ್ಷಕರ ನೇಮಕ

ಕಲಬುರಗಿ,ಏ.13:ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 6 ಜನ ಐ.ಆರ್.ಎಸ್./ ಐ.ಡಿ.ಎ.ಎಸ್. ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಿ ನಿಯೋಜಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.

ವೆಚ್ಚ ವೀಕ್ಷಕರಿಗೆ ಹಂಚಿಕೆ ಮಾಡಿದ ವಿಧಾನಸಭಾ ಮತಕ್ಷೇತ್ರ,    ವಾಸಸ್ಥಳ ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. 
34-ಅಫಜಲಪುರ ವಿಧಾನಸಭಾ ಕ್ಷೇತ್ರ: ರಾಜಕುಮಾರ ವಿ. ಕೇಂದ್ರೇ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9869731517.
 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ವಿಪುಲ್ ಚೌಡಾ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9408790771.
  40-ಚಿತ್ತಾಪುರ ಹಾಗೂ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:  ಶಂಕರ ಚಕ್ರಬರ್ಟಿ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9477330213.

41-ಸೇಡಂ ಹಾಗೂ 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಪಿ. ಕೀರ್ತಿನಾರಾಯಣ, ವಿ.ಟಿ.ಯು. ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 8610226005.

44-ಗುಲಬರ್ಗಾ ದಕ್ಷಿಣ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ: ಜ್ಯೋತೀಸ್ ಕೆ.ಎ., ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9605002559.

46-ಆಳಂದ ವಿಧಾನಸಭಾ ಕ್ಷೇತ್ರ: ರೇಜಾಯ್ ಕೃಷ್ಣನ್, ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 8156908967.