
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.21: ನಗರದ ಕಪ್ಪಗಲ್ ರಸ್ತೆ ಪ್ರದೇಶದಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಳ್ಳಾರಿಯಲ್ಲಿ ಈ ವರಗೆ ಮಹಿಳೆಯರು ಶಾಸಕರಾಗಿಲ್ಲ. ಮೊದಲ ಬಾರಿಗೆ ಪ್ರಬಲ ಸ್ಪರ್ಧಿಯಾಗಿ ನಾನು ಕಣದಲ್ಲಿರುವೆ. ಕ್ಷೇತ್ರದಲ್ಲಿ ಪುರುಷರಿಗಿಂತ ಹೆಚ್ಚಿರುವ ಮಹಿಳಾ ಮತದಾರರೆಲ್ಲ ನನಗೆ ಮತ ನೀಡಿ. ನಿಮ್ಮ ಪ್ರತಿನಿಧಿಯಾಗಿ ವಿಧಾನ ಸೌಧದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವೆ ಎಂದು ಹೇಳುತ್ತಿದ್ದಂತೆ. ಬಹುತೇಖ ಮಹಿಳೆಯರು ಮತ ನೀಡುವ ಭರವಶೆ ನೀಡಿದರು. ಅವರ ಭರವಶೆಯನ್ನು ಕಂಡು ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಶ ಪ್ರಕಾಶ್ ರೆಡ್ಡಿ, ಅನಂದ್, ಉಪ್ಪಾರ್ ಹನುಮೇಶ್. ರಾಘವೇಂದ್ರ (ಟೂಬ್ ರಘು), ಸೂರಿ, ಅಮರ್ನಾಥ್, ರಾಮು, ವಾಸು. ಚಿನ್ನೋಡು ನರಸಿಂಹ, ಅಲ್ಪಸಂಖ್ಯಾತ ಘಟಕದ ಇಸಾಕ್, ವೇಣಿ ವೀರಾಪುರ ಕಿಶೋರ್, ಬೆಲ್ಲಂ ವಾಸುರೆಡ್ಡಿ, ಸೂರಿಬಾಬು, ರೂಪ, ರಾಜೇಶ್ವರಿ ಮೊದಲಾದವರು ಇದ್ದರು.