
ಕಲಬುರಗಿ,ಮೇ.01:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿಯ ಅಗತ್ಯ ಸೇವೆಗಳ ಕರ್ತವ್ಯದಲ್ಲಿರುವ ಗೈರು ಹಾಜರಿ (AVES) ಮತದಾರರು ಪೋಸ್ಟಲ್ ವೋಟಿಂಗ್ ಮಾಡಲು ಇದೇ ಮೇ 2 ರಿಂದ 4 ರವರೆಗೆ ಪೋಸ್ಟಲ್ ವೋಟಿಂಗ್ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ.ಗುರುಕರ್ ಅವರು ತಿಳಿಸಿದ್ದಾರೆ.
ಅಗತ್ಯ ಸೇವೆಗಳ ಕರ್ತವ್ಯದಲ್ಲಿರುವ ಗೈರು ಹಾಜರಿ (AVES) ಮತದಾರರು ಇದೇ ಮೇ 2 ರಿಂದ ಮೇ 4 ರವರೆಗೆ ಪ್ರತಿದಿನ ಬೆಳಗಿನ 9 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ವಿಳಾಸದಲ್ಲಿರುವ ಪೋಸ್ಟಲ್ ವೋಟಿಂಗ್ ಕೇಂದ್ರಗಳಲ್ಲಿ (PVC) ಮತವನ್ನು ಚಲಾಯಿಸಬೇಕೆಂದು ಅವರು ತಿಳಿಸಿದ್ದಾರೆ.
ವಿಧಾನಸಭಾವಾರು ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಕೇಂದ್ರಗಳ ವಿವರ ಇಂತಿದೆ.
34-ಅಫಜಲಪೂರ: ಅಫಜಲಪೂರ ತಾಲ್ಲೂಕು ಆಡಳಿತ ಸೌಧ (ತಹಸೀಲ್ದಾರರ ಕಚೇರಿ).
35-ಜೇವರ್ಗಿ: ಜೇವರ್ಗಿ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದ ಕೊಠಡಿ.
40-ಚಿತ್ತಾಪೂರ: ಚಿತ್ತಾಪೂರ ತಹಸೀಲ್ದಾರರ ಕಾರ್ಯಾಲಯದ ಸಭಾಂಗಣ.
41-ಸೇಡಂ: ಸೇಡಂ ತಹಸೀಲ್ದಾರರ ಕಚೇರಿ (ತಹಸೀಲ್ದಾರ ಗ್ರೇಡ್-02 ಕೊಠಡಿ).
42-ಚಿಂಚೋಳಿ: ಚಿಂಚೋಳಿ ತಹಸೀಲ್ದಾರರ ಕಚೇರಿ ಆವರಣ.
43-ಕಲಬುರಗಿ ಗ್ರಾಮೀಣ: 43-ಗುಲಬರ್ಗಾ ಗ್ರಾಮೀಣ (ಪ.ಜಾ) ವಿಧಾನಸಭಾ ಕ್ಷೇತ್ರದ ಚುನಾವಣಾ
ಅಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ ಗ್ರೇಡ್-2 ಕೋಣೆ
ಕಲಬುರಗಿ.
44-ಗುಲಬರ್ಗಾ ದಕ್ಷಿಣ: ಕಲಬುರಗಿ ಮಹಾನಗರ ಪಾಲಿಕೆಯ (ಹೊಸ ಕಟ್ಟಡ) ಕೋಣೆ ಸಂಖ್ಯೆ-14.
45- ಗುಲಬರ್ಗಾ ಉತ್ತರ: ಕಲಬುರಗಿ ಮಹಾನಗರ ಪಾಲಿಕೆಯ ಸಿಬ್ಬಂದಿ ಶಾಖೆ (ಕೊಠಡಿ ಸಂಖ್ಯೆ -27).
46-ಆಳಂದ: ಆಳಂದ ತಾಲ್ಲೂಕು ಆಡಳಿತ ಸೌಧ (ತಹಸೀಲ್ದಾರ ಕಚೇರಿ).