
ದಾವಣಗೆರೆ,ಏ.21; ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಚುನಾವಣಾ ಆಯೋಗ ಚುನಾವಣಾ ಸಾಮಾನ್ಯ ವೀಕ್ಷಕರು ಮತ್ತು ಪೊಲೀಸ್ ವೀಕ್ಷಕರು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು ಏಪ್ರಿಲ್ 20 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಗೆ ಸಂಬAಧಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿಯವರಿಂದ ಪಡೆದರು.ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಜಿಲ್ಲೆಯಲ್ಲಿ 2011ರ ಜನಗಣತಿಯನ್ವಯ 1643494 ಜನಸಂಖ್ಯೆ ಇದ್ದು ಬೆಳವಣಿಗೆ ದರದನ್ವಯ ಪ್ರಸ್ತುತ 1882261 ಜನಸಂಖ್ಯೆ ಹೊಂದಲಾಗಿದೆ ಎಂದು ಅಂದಾಜಿಸಲಾಗಿದೆ. 194 ಗ್ರಾಮ ಪಂಚಾಯಿತಿಗಳು ಮತ್ತು 932 ಕಂದಾಯ ಗ್ರಾಮಗಳು ಇದ್ದು 1435871 ಮತದಾರರಿದ್ದಾರೆ. ಪ್ರಸ್ತುತ 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 1683 ಮತಗಟ್ಟೆಗಳು ಮತ್ತು ಹೆಚ್ಚುವರಿಯಾಗಿ 2 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಲ್ಲಿ 1172 ಮತಗಟ್ಟೆ ಸ್ಥಳಗಳಿರುತ್ತವೆ. ಈ ಮತಗಟ್ಟೆಗಳಿಗೆ 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಡಿದ್ದು 1683 ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು ತಿಳಿಸಿದರು.ಚುನಾವಣಾ ತಂಡಗಳನ್ನು ರಚಿಸಲಾಗಿದ್ದು ವೆಚ್ಚದ ಮೇಲ್ವಿಚಾರಣೆ, ಸ್ಕಾ÷್ವಡ್, ಚೆಕ್‌ಪೋಸ್ಟ್, ಎಂಸಿಎAಸಿ ಸೇರಿದಂತೆ ಸಾಮಾಜಿಕಜಾಲ ವೀಕ್ಷಣೆ, ಕಂಟ್ರೋಲ್ ರೂಂ, ಮಸ್ಟರಿಂಗ್, ಡಿ.ಮಸ್ಟರಿಂಗ್ ಸ್ಥಳ, ಚುನಾವಣಾ ಸಿಬ್ಬಂದಿ ನೇಮಕ, ತರಬೇತಿ, ವಾಹನಗಳ ವ್ಯವಸ್ಥೆ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ ಈಗಾಗಲೇ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್ಗಳಲ್ಲಿ ಅರೆ ಸೇನಾಪಡೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು 7 ತುಕಡಿಗಳು ಕಾರ್ಯನಿರ್ವಹಿಸುತ್ತಿವೆ. ಮತದಾನದ ವೇಳೆ ಇನ್ನೂ ಹೆಚ್ಚಿನ ಅರೆಸೇನಾ ಪಡೆ ಸಿಬ್ಬಂದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಮತದಾನ ದಿನದಂದು ಮತಗಟ್ಟೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ವಿವರವಾದ ಯೋಜನೆ ಸಿದ್ದಪಡಿಸಲಾಗಿದೆ. ಗೂಂಡಾ ಕಾಯ್ದೆ, ರೌಡಿಸೀಟರ್‌ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಪರವಾನಗಿ ಪಡೆಯಲಾಗಿದ್ದ 688 ಶಸ್ತಾçಸ್ತçಗಳಲ್ಲಿ 635 ಠೇವಣಿ ಮಾಡಿಸಲಾಗಿ ಬ್ಯಾಂಕ್ ಇತರೆ ಭದ್ರತಾ ಏಜೆನ್ಸಿಗಳಿಗೆ ವಿನಾಯಿತಿ ನೀಡಲಾಗಿದೆ. ಚುನಾವಣಾ ಸಂದರ್ಭದಲ್ಲಿ ಬೆದರಿಕೆಯುಂಟು ಮಾಡುವವರ ಮೇಲೆ ತೀವ್ರ ನಿಗಾವಹಿಸಲಾಗಿದ್ದು ಜನರು ನಿರ್ಭಯವಾಗಿ ಚುನಾವಣೆಯಲ್ಲಿ ಭಾಗಿಯಾಗಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಂಕಿಅAಶಗಳೊAದಿಗೆ ವಿವರಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಹಿಟ್ನಾಳ್ ರವರು ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಮತದಾನ ಹೆಚ್ಚಳಕ್ಕಾಗಿ ಕೈಗೊಂಡ ಕ್ರಮಗಳು ಮತ್ತು ಕಾರ್ಯಕ್ರಮಗಳ ವಿವರ ನೀಡಿದರು.
ಸಭೆಯಲ್ಲಿ ಚುನಾವಣಾ ವೀಕ್ಷಕರು, ಪೊಲೀಸ್ ವೀಕ್ಷಕರು ಮತ್ತು ವೆಚ್ಚ ವೀಕ್ಷಕರು, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.