ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂತಿಮ ಫಲಿತಾಂಶ ಪ್ರಕಟ:ಯಾದಗಿರಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯ : ಒಂದು ಕ್ಷೇತ್ರದಲ್ಲಿ ಜೆಡಿಎಸ್‍ಗೆ ಜಯ

ಯಾದಗಿರಿ : ಮೇ 14: ಯಾದಗಿರಿ ಜಿಲ್ಲೆಯಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯಾತೀತ) ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಜಿಲ್ಲೆಯ ಶೋರಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜಾ ವೆಂಕಟಪ್ಪನಾಯಕ, ಶಹಾಪೂರ ವಿಧಾನಸಭಾ ಕ್ಷೇತ್ರದಿಂದ ಶರಣಬಸಪ್ಪ ದರ್ಶನಾಪೂರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಜಯ ಸಾಧಿಸಿದ್ದು, ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ಜನತಾದಳ (ಜಾತ್ಯಾತೀತ) ಪಕ್ಷದಿಂದ ಶ್ರೀ ಶರಣಗೌಡ ಕಂದಕೂರು ಅವರು ಜಯ ಸಾಧಿಸಿದ್ದಾರೆ. ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ಕೆಳಗಿನಂತೆ ಇದೆ.
36-ಶೋರಾಪೂರ ವಿಧಾನಸಭಾ ಕ್ಷೇತ್ರ ಫಲಿತಾಂಶ : ಶೋರಾಪೂರ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜಾ ವೆಂಕಟಪ್ಪ ನಾಯಕ ಅವರು ಒಟ್ಟು-1,13,559 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದು, ತಮ್ಮ ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿ ನರಸಿಂಹನಾಯಕ (ರಾಜುಗೌಡ) ಅವರನ್ನು 25,223 ಮತಗಳ ಅಂತರದಿಂದ ಸೋಲಿಸಿದ್ದು, ಬಿಜೆಪಿಯ ಅಭ್ಯರ್ಥಿ ನರಸಿಂಹನಾಯಕ (ರಾಜುಗೌಡ) ಅವರು 88336 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದರಂತೆ ಆಮ್ ಆದಮಿ ಪಕ್ಷದ ಅಭ್ಯರ್ಥಿ ಆರ್. ಮಂಜುನಾಥ ನಾಯಕ 1348 ಮತಗಳನ್ನು ಪಡೆದಿದ್ದಾರೆ. ಜನತಾದಳ (ಜಾತ್ಯಾತೀತ) ಶ್ರವಣಕುಮಾರ ನಾಯಕ 1544, ಪಕ್ಷೇತರ ಅಭ್ಯರ್ಥಿಗಳಾದ ಅಶೋಕ ಲಕ್ಷಣ 349 ಮತಗಳು, ವೆಂಕಟಪ್ಪ ನಾಯಕ ಚಂದ್ರಶೇಖರ ನಾಯಕ 765 ಮತಗಳು ಹಾಗೂ ಶಶಿಕುಮಾರ ಅವರು 370 ಮತಗಳನ್ನು ಪಡೆದಿದ್ದಾರೆ.
37-ಶಹಾಪೂರ ವಿಧಾನಸಭಾ ಕ್ಷೇತ್ರ : ಶಹಾಪೂರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶರಣಬಸಪ್ಪ ದರ್ಶನಾಪೂರ ಅವರು ಒಟ್ಟು-78353 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದು, ತಮ್ಮ ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿ ಅಮೀನರೆಡ್ಡಿ ಅವರನ್ನು 26027 ಮತಗಳ ಅಂತರದಿಂದ ಸೋಲಿಸಿದ್ದು, ಬಿಜೆಪಿಯ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಅವರು 52326 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದರಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಗುರುಪಾಟೀಲ್ ಶಿರವಾಳ 30396 ಮತಗಳು, ಆಮ್ ಆದಮಿ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಸಾಬಯ್ಯ 1320 ಮತಗಳು, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಪ್ರಕಾಶ ಬಿ.ಕುಲಕರ್ಣಿ 888 ಮತಗಳು, ಸ್ವಯಂ ಕೃಷಿ ಪಕ್ಷದ ಅಭ್ಯರ್ಥಿ ವಿಶ್ವಾರಾಧ್ಯ ಬಿ.ಮುಡಬೂಳ 740 ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಮಹ್ಮದ ಜಿಲಾನಿ ಬಂದಗಿಸಾಬ್ ನಾಶಿ 473 ಮತಗಳ, ಹಾಜಿ ಎಮ್ ಹುಸೇನ 312, ಹಾಗೂ ಹೊನ್ನಯ್ಯ ಹೋತಪೇಠ ಅವರು 654 ಮತಗಳನ್ನು ಪಡೆದಿದ್ದಾರೆ.
38-ಯಾದಗಿರಿ ವಿಧಾನಸಭಾ ಕ್ಷೇತ್ರ : ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಒಟ್ಟು-53802 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರನ್ನು 3673 ಮತಗಳ ಅಂತರದಿಂದ ಸೋಲಿಸಿದ್ದು, ಬಿಜೆಪಿಯ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರು 50129 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದರಂತೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಬಸವರಾಜ ಎಮ್ ರಾಮಸಮುದ್ರ ಅವರು 694 ಮತಗಳು, ಜನತಾದಳ (ಜಾತ್ಯಾತೀತ) ಡಾ.ಎ.ಬಿ ಮಲಕರೆಡ್ಡಿ 7420 ಮತಗಳು, ಡಾ.ಅಂಬೇಡ್ಕರ್ ಪೀಪಲ್ಸ್ ಪಕ್ಷದ ಮಾರುತಿ ರಾವ್ ಜಂಬಗಾ 502 ಮತಗಳು, ಆಲ್ ಇಂಡಿಯಾ ಉಲೇಮಾ ಪಕ್ಷದ ರಮಜಾನ ಬೀ ಸೋಫಿಸಾಬ್ 564 ಮತಗಳು, ಕರ್ನಾಟಕ ರಾಷ್ಟ್ರ ಸಮಿತಿ ಶರಣಬಸಪ್ಪ ಕಮಲಾಪೂರು 199 ಮತಗಳು, ಸೋಷಿಯಲಿಷ್ಟ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ ಪಕ್ಷದ) ಅಭ್ಯರ್ಥಿ ಕೆ.ಸೋಮಶೇಖರ ಅವರು 466 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ನಾಜರೀನ್ ಕೌಸರ್ 226 ಮತಗಳು, ಭೀಮಣ್ಣ ಗುರುಬಸಯ್ಯ 252 ಮತಗಳು, ಮರಗಪ್ಪ ಸಾಲಿಕೇರಿ 245 ಮತಗಳು, ಮಹಾಂತೇಶ ಪರಶುರಾಮ ಭೋವಿ 336 ಮತಗಳು, ಯಂಕಪ್ಪ ದೇವೀಂದ್ರಪ್ಪ ಬಂಗಲಿ 853 ಮತಗಳು, ವೆಂಕಟರೆಡ್ಡಿ 867 ಮತಗಳು, ಹಣಮಗೌಡ ಬೀರನಕಲ್ 36838 ಮತಗಳು ಪಡೆದಿದ್ದು, ನೋಟಾ ಮತಗಳು 1609 ಚಲಾವಣೆಯಾಗಿವೆ.
39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರ : ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾದ ಶರಣಗೌಡ ಕಂದಕೂರ ಅವರು ಒಟ್ಟು-72297 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರನ್ನು 2510 ಮತಗಳ ಅಂತರದಿಂದ ಸೋಲಿಸಿದ್ದು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರು 69718 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಲಲೀತಾ ಮೌಲಾಲಿ ಅನಪೂರ ಅವರು 14571 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದರಂತೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಬಿ.ವಾಸು 2590 ಮತಗಳು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಸ್. ನಿಜಲಿಂಗಪ್ಪ ಡೊಡ್ಡಸಂಬ್ರ 1070 ಮತಗಳು ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಅವರು 668 ಮತಗಳನ್ನು ಪಡೆದಿದ್ದಾರೆ.