ವಿಜಯಪುರ:ಮೇ.14: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 06 ಕಾಂಗ್ರೆಸ್, 01 ಬಿಜೆಪಿ, ಹಾಗೂ 01 ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ ಶಂಕರರಾವ್ ನಾಡಗೌಡ 79483 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎ.ಎಸ್.ಪಾಟೀಲ (ನಡಹಳ್ಳಿ) ವಿರುದ್ಧ 7637 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ 65952 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸೋಮನಗೌಡ ಬಿ.ಪಾಟೀಲ (ಸಾಸನೂರ) ವಿರುದ್ಧ 20175 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ 68126 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ ಇವರ ವಿರುದ್ಧ 24863 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
29-ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ 93923 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ (ವಿಜಯರಗೌಡ) ಎಸ್.ಪಾಟೀಲ ಇವರ ವಿರುದ್ಧ 15216 ಮತಗಳ ಅಂತರದಿಮದ ಗೆಲುವು ಸಾಧಿಸಿದ್ದಾರೆ.
30-ಬಿಜಾಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ (ಯತ್ನಾಳ) 94201 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲಹಮೀದ ಖಾಜಾಸಾಬ ಮುಶ್ರೀಪ್ ಇವರ ವಿರುದ್ಧ 8223 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
31-ನಾಗಠಾಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ 78990 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಂಜೀವ ಮಳಸಿದ್ದಪ್ಪ ಐಹೊಳೆ ಇವರ ವಿರುದ್ಧ 30815 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
32-ಇಂಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ವ್ಹಿ.ಪಾಟೀಲ 71785 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲ (ಹಂಜಗಿ) ಇವರ ವಿರುದ್ಧ 10329 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
33-ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಲ್ಲಪ್ಪ ಮನಗೂಳಿ 87621 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಭೂಸನೂರ ರಮೇಶ ಬಾಳÀಪ್ಪ ಇವರನ್ನು 7808 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಭ್ಯರ್ಥಿವಾರು ಪಡೆದ ಮತಗಳ ವಿವರ :
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ 79483, ಬಿಜೆಪಿ ಪಕ್ಷದ ಎ.ಎಸ್. ಪಾಟೀಲ ನಡಹಳ್ಳಿ 71846, ಬಹುಜನ ಸಮಾಜ ಪಕ್ಷದ ಕೆ.ಬಿ.ದೊಡಮನಿ 725, ಜನತಾ ದಳದ ಬಸವರಾಜ ಭೀಮಣ್ಣ ಭಜಂತ್ರಿ 533, ಆಮ್ ಆದ್ಮಿ ಪಕ್ಷದ ಮೆಹಬೂಬ ಶಬ್ಬೀರಅಹ್ಮದ ಹಡಲಗೇರಿ 231, ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ಜಾಕೀರ ಹುಸೇನ್ ಉಸ್ಮಾನ ಲಾಹೋರಿ 147, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದೀಪಾ ಮಹಾಂತಪ್ಪ ಮಣೂರ 234, ರಾಷ್ಟ್ರೀಯ ಜನಸಂಭವನ ಪಾರ್ಟಿಯ ರಾಮನಗೌಡ ಎಸ್. ಬಾಳವಾಡ 588 ಮತಗಳನ್ನು ಪಡೆದಿದ್ದು 1234 ನೋಟಾ ಮತಗಳು ಚಲಾವಣೆಯಾಗಿವೆ.
27-ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಜನತಾದಳದ ಭೀಮನಗೌಡ ಪಾಟೀಲ (ರಾಜುಗೌಡ) ಬಸನಗೌಡ ಪಾಟೀಲ 65952 ಕಾಂಗ್ರೆಸ್ ಪಕ್ಷದ ಸುಣಗಾರ ಶರಣಪ್ಪ ತಿಪ್ಪಣ್ಣ 33673 ಬಿಜೆಪಿಯ ಸೋಮನಗೌಡ ಬ. ಪಾಟೀಲ ಸಾಸನೂರ 45777 ಆಮ್ ಆದ್ಮಿ ಪಾರ್ಟಿಯ ಬಸಲಿಂಗಪ್ಪ ಉರ್ಫ ಬಸಲಿಂಗಪ್ಪಗೌಡ ತಂದೆ ಬಸವಂತರಾಯ ಇಂಗಳಗಿ 1787 ಬಹುಜನ ಸಮಾಜ ಪಕ್ಷದ ರಾಜು ಮಾದರ (ಗುಬ್ಬೇವಾಡ) 779 ಕರ್ನಾಟಕ ಜನಸೇವೆ ಪಾರ್ಟಿಯ ಗುರುಶಾಂತವೀರ ಸ್ವಾಮಿಜಿ ಹಿರೇಮಠ ಇಟಗಿ 439 ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ ಪಕ್ಷದ ಬೇವಿನಕಟ್ಟಿ ಗೈಬಪ್ಪ ಭೀಮಪ್ಪ 216 ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮನಸೂರಬಾಬ ನಬಿಸಾಹೇಬ ಬೀಳಗಿ 129 ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದ ಶಿವಾನಂದ ಯಡಹಳ್ಳಿ (ಕೊಂಡಗೂಳಿ) 198 ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲರಹಿಮಾನ ಮಹ್ಮದಹನೀಫ್ ದುಂಡಸಿ 218 ಕೆಂಪೇಗೌಡ ಈರಣಗೌಡ ಕೇಶಪ್ಪಗೋಳ 297 ಭೀಮನಗೌಡ ಬಸನಗೌಡ ಪಾಟೀಲ 1044 ಶ್ರೀಶೈಲ ರುದ್ರಪ್ಪ ಕಕ್ಕಳಮೇಲಿ 779 ಮತಗಳನ್ನು ಪಡೆದಿದ್ದು 695 ನೋಟಾ ಮತಗಳು ಚಲಾವಣೆಯಾಗಿವೆ.
28-ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಿವಾನಂದ ಪಾಟೀಲ 68126 ಬಹುಜನ ಸಮಾಜ ಪಕ್ಷದ ಗುರುಬಸಪ್ಪ ಬಸಪ್ಪ ಢವಳಗಿ 774 ಜೆಡಿಎಸ್ ಪಕ್ಷದ ಅಪ್ಪುಗೌಡ ಉರ್ಫ ಸೋಮನಗೌಡ ಬಸನಗೌಡ ಪಾಟೀಲ 40197 ಬಿಜೆಪಿ ಪಕ್ಷದ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ 43263 ಆಲ್ ಇಂಡಿಯಾ ಮಜಲಿಸ್-ಇ-ಇತಿಹಾದುಲ್ ಮುಸ್ಲಿಮಿನ್ ಪಕ್ಷದ ಅಲ್ಲಾಬಕ್ಷ ಬಿಜಾಪುರ 1475 ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಜಮೀರಅಹ್ಮದ ಇನಾಂದಾರ 140 ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾರಾಯಣ ನೀಲಕಂಠ ರಾಠೋಡ 282 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರವೀಣಕುಮಾರ ರಾಯಗೊಂಡ (ಮುತ್ತಗಿ) 303 ಐರಾ ನ್ಯಾಷನಲ್ ಪಾರ್ಟಿಯ ವಿದ್ಯಾ ಬಿರಾದಾರ 146 ಉತ್ತಮ ಪ್ರಜಾಕೀಯ ಪಾರ್ಟಿಯ ಅವಟಿ ಶಂಕರೆಪ್ಪ ಕಾಶೀನಾಥ 359 ಪಕ್ಷೇತರ ಅಭ್ಯರ್ಥಿಗಳಾದ ರಾಜೇಶ್ವರಿ ರಾಜಶೇಖರ ಯರನಾಳ 746 ಲಕ್ಷಿಂಬಾಯಿ ಎಸ್.ಜಿ.ಪಾಟೀಲ 1050 ಸಂಗಪ್ಪ ಚಂದು ಲಮಾಣಿ 747 ಮತಗಳನ್ನು ಪಡೆದಿದ್ದು 838 ನೋಟಾ ಮತಗಳು ಚಲಾವಣೆಯಾಗಿವೆ.
29-ಬಬಲೇಶ್ವರ ವಿಧಾನಸಭಾ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಬಿ.ಪಾಟೀಲ 93923 ಬಿಜೆಪಿ ಪಕ್ಷದ ವಿಜಯಕುಮಾರ (ವಿಜಯಗೌಡ) ಪಾಟೀಲ 78707 ಜೆಡಿಎಸ್‍ನ ಬಸವರಾಜ ಹೊನವಾಡ 1304 ಆಮ್ ಆದ್ಮಿ ಪಾರ್ಟಿಯ ಗಂಗನಳ್ಳಿ ಕಾಮಣ್ಣ ಸಿದ್ದಪ್ಪ 526 ಬಹುಜನ ಸಮಾಜ ಪಾರ್ಟಿಯ ಮೆಹಬೂಬ ಮಲಬೋಡಿ 915 ರಾಷ್ಟ್ರೀಯ ಸಮಾಜ ಪಕ್ಷದ ರವಿಚಂದ್ರ ತಮ್ಮಣ್ಣ ಡೊಂಬಾಳಿ 417 ಉತ್ತಮ ಪ್ರಜಾಕೀಯ ಪಕ್ಷದ ಎಸ್.ಎಂ.ಗಾಂಜಿ (ಉಪ್ಪಾರ) 172 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುನೀಲ ರಾಠೋಡ 121 ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲರಹಿಮಾನ ಮಹ್ಮದಹನೀಫ್ ದುಂಡಸಿ 91 ಜ್ಯೋತಿಬಾ ಸಾಳುಂಕೆ 212 ತಳೇವಾಡ ಪಾಟೀಲ 566 ಭೀರಪ್ಪ ಮಾಳಪ್ಪ ಸೋಡ್ಡಿ 398 ಮೋತಿರಾಮ ಧರ್ಮು ಚವ್ಹಾಣ 955 ಮಂಜುಳಾ ಕಿಶನ ಚವ್ಹಾಣ 268 ಮತಗಳನ್ನು ಪಡೆದಿದ್ದು 611 ನೋಟಾ ಮತಗಳು ಚಲಾವಣೆಯಾಗಿವೆ.
30-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಪಕ್ಷದ ಬಸನಗೌಡ ರಾ. ಪಾಟೀಲ (ಯತ್ನಾಳ) 94201 ಕಾಂಗ್ರೆಸ್ ಪಕ್ಷದ ಅಬ್ದುಲ ಹಮೀದ ಖಾಜಾಸಾಬ ಮುಶರೀಫ್ 85978 ಜನತಾ ದಳ ಪಕ್ಷದ ಬಂದೇನವಾಜ ಹುಸೇನಸಾಬ ಮಹಾಬರಿ 459 ಬಹುಜನ ಸಮಾಜ ಪಕ್ಷದ ಕೆಂಗನಾಳ ಮಲ್ಲಿಕಾರ್ಜುನ ಭೀಮಪ್ಪ 213 ಆಮ್ ಆದ್ಮಿ ಪಕ್ಷದ ಹಾಸಿಂಪಿರ ಈ. ವಾಲಿಕಾರ 179 ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಮಲ್ಲಿಕಾರ್ಜುನ ಎಚ್.ಟಿ. 49 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಕೇಶ ಇಂಗಳಗಿ (ಹಾಲಹಳ್ಳಿ) 43 ಶಿವಸೇನಾ ಉದ್ಧವ ಬಾಳಾಸಾಹೇಬ ಠಾಕ್ರೆ ಪಕ್ಷದ ಸತೀಶ ಅಶೋಕ ಪಾಟೀಲ 153 ಪಕ್ಷೇತರ ಅಭ್ಯರ್ಥಿಗಳಾದ ಈರಪ್ಪಾ ಕುಂಬಾರ 46 ಕಡೇಚೂರ ಕಲ್ಲಪ್ಪ ರೇವಣಸಿದ್ದಪ್ಪ 74 ಚಂದ್ರಗಿರಿ ಹೊನ್ನದ 54 ಮೋತಿರಾಮ ಧರ್ಮು ಚವ್ಹಾಣ 118 ಮೋದಿನಸಾಬ ಬಂದಗಿಸಾಬ ಅಂಕಲಗಿ 135 ಹಾಗೂ ರಾಜು ಯಲ್ಲಪ್ಪ ಪವಾರ 351 ಮತಗಳನ್ನು ಪಡೆದಿದ್ದು 994 ನೋಟಾ ಮತಗಳು ಚಲಾವಣೆಯಾಗಿವೆ.
31-ನಾಗಠಾಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಟಕಧೋಂಡ ವಿಠ್ಠಲ ಧೋಂಡಿಬಾ 78990 ಬಿಜೆಪಿ ಪಕ್ಷದ ಸಂಜೀವ ಮಳಸಿದ್ದಪ್ಪ ಐಹೊಳೆ 48175 ಜನತಾದಳ ಪಕ್ಷದ ದೇವಾನಂದ ಫೂಲಸಿಂಗ್ ಚವ್ಹಾಣ 34114 ಬಹುಜನ ಸಮಾಜ ಪಾರ್ಟಿಯ ಕಲ್ಲಪ್ಪ ತೊರವಿ 954 ಆಮ ಆದ್ಮಿ ಪಾರ್ಟಿಯ ಗುರು ಮುನ್ನು ಚವ್ಹಾಣ 2974 ರಾಣಿ ಚನ್ನಮ್ಮ ಪಾರ್ಟಿಯ ಕಟಕಧೋಂಡ ಕವಿತಾ ವ್ಹಿ.ಡಿ. 527 ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಕುಲಪ್ಪ ಭೀಮು ಚವ್ಹಾಣ 360 ಸಾರ್ವಜನಿಕ ಆದರ್ಶ ಸೇನಾ ಪಕ್ಷದ ಭಾರತಿ ಕಾಲೇಬಾಗ 261 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವಿಕ್ರಮ ವಾಗೋಮೋರೆ (ಜಿಗಜೇವಣಿ) 287 ಹಿಂದೂಸ್ತಾನ ಜನತಾ ಪಾರ್ಟಿಯ ವ್ಹಿ.ಡಿ. ಕಟಕಧೋಂಡ 304 ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಂಡಿ ಶ್ರೀಕಾಂತ ಹಣಮಂತಪ್ಪ 10770 ಪಕ್ಷೇತರ ಅಭ್ಯರ್ಥಿಗಳಾದ ಅರುಣಾ ಗಂ. ಕಟಕಧೋಂಡ 366 ಶಂಕರ ಚವ್ಹಾಣ 617 ಸುನೀಲ ಚವ್ಹಾಣ 487 ಸಂಜೀವ ಪುಂಡಲೀಕ ಮಾನೆ 338 ಮತಗಳನ್ನು ಪಡೆದಿದ್ದು 1016 ನೋಟಾ ಮತಗಳು ಚಲಾವಣೆಯಾಗಿವೆ.
32-ಇಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ 71785 ಜೆಡಿಎಸ್ ಪಕ್ಷದ ಬಿ.ಡಿ.ಪಾಟೀಲ (ಹಂಜಗಿ) 61456 ಬಿಜೆಪಿ ಪಕ್ಷದ ಕಾಸುಗೌಡ ಈರಪ್ಪಗೌಡ ಬಿರಾದಾರ 39862 ಆಮ್‍ಆದ್ಮಿ ಪಾರ್ಟಿಯ ಗೋಪಾಲ ಆರ್. ಪಾಟೀಲ 3353 ಬಹುಜನ ಸಮಾಜ ಪಾರ್ಟಿಯ ನಾಗೇಶ ಶಿವಶರಣ 738 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಶೋಕ ಜಾಧವ 915 ರಾಣಿ ಚನ್ನಮ್ಮ ಪಾರ್ಟಿಯ ಕವಿತಾ. ಶ್ರೀ. ಕಟಕದೊಂಡ 572 ಪಕ್ಷೇತರ ಅಭ್ಯರ್ಥಿಗಳಾದ ಎಂ.ಎಂ. ಬಾಗವಾನ 922 ಹಾಗೂ ಗೊಲ್ಲಾಳ ನಿಂಗನಗೌಡ ಜ್ಯೊತಿಗೊಂಡ 370 ಮತಗಳನ್ನು ಪಡೆದಿದ್ದು 886 ನೋಟಾ ಮತಗಳು ಚಲಾವಣೆಯಾಗಿವೆ.
33-ಸಿಂದಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಲ್ಲಪ್ಪ ಮನಗೂಳಿ 87621
ಬಿಜೆಪಿ ಪಕ್ಷದ ಭೂಸನೂರ ರಮೇಶ ಬಾಳಪ್ಪ 79813 ಜೆಡಿಎಸ್ ಪಕ್ಷದ ವಿಶಾಲಾಕ್ಷಿ ಶಿವಾನಂದ ಪಾಟೀಲ 2283 ಬಹುಜನ ಸಮಾಜ ಪಾರ್ಟಿಯ ಡಾ. ದಸ್ತಗೀರ ಮುಲ್ಲಾ 813 ಆಮ್ ಆದ್ಮಿ ಪಾರ್ಟಿಯ ಮುರಿಗೆಪ್ಪಗೌಡ ಸಿ.ರದ್ದೇವಾಡಗಿ 851 ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದ ಪುಂಡಲೀಕ ಬಿರಾದಾರ 234 ಪಕ್ಷೇತರ ಅಭ್ಯರ್ಥಿಗಳಾದ ಜೀಲಾನಿ ಗುಡುಸಾಬ ಮುಲ್ಲಾ 170 ದೀಪಿಕಾ ಎಸ್. 376 ಹಾಗೂ ಮೊಹಮ್ಮದ ಮುಶ್ತಾಕ ಅಮೀನೋದ್ದಿನ ನಾಯ್ಕೊಡಿ 275 ಮತಗಳನ್ನು ಪಡೆದಿದ್ದು 963 ನೋಟಾ ಮತಗಳು ಚಲಾವಣೆಯಾಗಿವೆ.