ವಿಜಯಪುರ:ಎ.22: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತೆ ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ 27 ಚೆಕ್ ಪೆÇೀಸ್ಟ್ ಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಬೇಸಿಗೆಯ ಬಿಸಲು ಹೆಚ್ಚಾಗುತ್ತಿರುವುದರಿಂದ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನ ತಪಾಸಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಯಾ ಚೆಕ್ ಫೆÇಸ್ಟ್ ಗಳಲ್ಲಿ ಹಸಿರು ಪರದೆಯಿಂದ ನೆರಳಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
27 ಚೆಕ್ ಪೆÇೀಸ್ಟ್ ಗಳಲ್ಲಿ, ವಾಹನಗಳ ಪರಿಶೀಲನೆ ನಡೆಯುವ ಸ್ಥಳಗಳಲ್ಲಿ ಹಸಿರು ಪರದೆಯ ಮೇಲ್ ಹೊದಿಕೆಯಿಂದ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದು, ಚೆಕ್ ಪೆÇಸ್ಟಗಳಲ್ಲಿ, ವಾಹನ ತಪಾಸಣೆ ನಡೆಯುವ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮುಂಬಾಗದಲ್ಲಿ ಹಾದು ಒಳಬರುವ ಹಾಗೂ ಹೊರಹೋಗುವ ವಾಹನಗಳಿಗೆ ಹಸಿರು ಬಣ್ಣದ ನೆಟ್ ರೀತಿಯ ಗುಣಮಟ್ಟದ ನೆರಳಿನ ವ್ಯವಸ್ಥೆ ಹೊಂದಿದ ಚಪ್ಪರ ಈಗಾಗಲೇ ಸಜ್ಜಾಗುತ್ತಿದೆ.
ಮತದಾನವು ಶಾಂತಿಯುತವಾಗಿ, ಪಾರದರ್ಶಕವಾಗಿ ಜರುಗಿಸುವ ಉದ್ದೇಶದಿಂದ ಅಂತರ ರಾಜ್ಯ, ಅಂತರ ಜಿಲ್ಲೆಯಲ್ಲಿ ಒಟ್ಟು 27 ಚೆಕ್ ಪೆÇೀಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ವಿಜಯಪುರ ಜಿಲ್ಲೆಯು ಮಹಾರಾಷ್ಟ ಗಡಿಗೆ ಹೊಂದಿಕೊಂಡಿರುವುದರಿಂದ 11 ಅಂತರರಾಜ್ಯ ಹಾಗೂ 16 ಅಂತರಜಿಲ್ಲಾ ಚೆಕ್ ಪೆÇೀಸ್ಟ ಗಳನ್ನು ಸ್ಥಾಪನೆ ಮಾಡಲಾಗಿದೆ.
ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 2, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 2, ಬಬಲೇಶ್ವರ ಮತಕ್ಷೇತ್ರದಲ್ಲಿ 7, ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ 3, ನಾಗಠಾಣ ಮತಕ್ಷೇತ್ರದಲ್ಲಿ 7, ಇಂಡಿ ಮತಕ್ಷೇತ್ರದಲ್ಲಿ 2, ಸಿಂದಗಿ ಮತಕ್ಷೇತ್ರದಲ್ಲಿ 3 ಚೆಕ್ ಪೋಸ್ಟ್‍ಗಳಿದ್ದು, ಅಂತರ್ ಸೇರಿದಂತೆ ಒಟ್ಟು 27 ಚೆಕ್ ಪೆÇೀಸ್ಟ್ಗಳನ್ನು ಸ್ಥಾಪಿಸಿ ಚುನಾವಣಾ ಅಕ್ರಮದ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ. ಹಾಗಾಗಿ ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಮಾತ್ರವಲ್ಲದೇ ಹೊರ ಹೋಗುವ ಮತ್ತು ಒಳಬರುವ ವಾಹನಗಳಿಗೆ, ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.