ವಿಧಾನಸಭಾ ಚುನಾವಣೆ ಹಿನ್ನೆಲೆ ಬಸ್ ಕೊರತೆ: ಪ್ರಯಾಣಿಕರು ಪರದಾಟ

ರಾಯಚೂರು, ಮೇ.೧೦, ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯ ಸಾರಿಗೆ ಬಸ್‌ಗಳನ್ನು ನಿಯೋಜಿಸಿದ್ದರಿಂದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೇ ಪರದಾಡಿದರು.
ನಗರದ ಬಸ್ ನಿಲ್ದಾಣದಲ್ಲಿ ಬಸ್ ಕೊರತೆಯಿಂದ ಪ್ರಯಾಣಿಕರು ಬಸ್ ಗಾಗಿ ಕಾದು ಕುಳಿತಿದ್ದರು.
ಬಸ್‌ಗಳು ಸಿಗದೆ ಹೈರಾಣಾದರು. ಖಾಸಗಿ ಟೆಂಪೊ, ಟ್ಯಾಕ್ಸಿಗಳನ್ನು ಅವಲಂಬಿಸಿದರು. ನಗರ ಬಸ್‌ಗಳು ಸಿಗದೆ ಆಟೊ, ಬಾಡಿಗೆ ಬೈಕ್ ಸೇವೆಗಳನ್ನು ಅವಲಂಬಿಸಿ ತಮ್ಮ ಊರಿಗಳಿಗೆ ತೆರಳಿದರು.
ನಗರದಲ್ಲಿ ವಾಸಿಸುವ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಕ್ಷೇತ್ರಗಳ ಮತದಾರರು ಮತ್ತು ಪ್ರಯಾಣಿಕರು ಊರುಗಳಿಗೆ ತೆರಳಲು ಬಸ್ ಕೊರತೆಯಿಂದ
ತೊಂದರೆಪಟ್ಟರು. ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.