ದಾವಣಗೆರೆ; ಏ.18; ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಎಲ್ಲಾ ಕಾರ್ಮಿಕರು ಮತದಾನ ದಿನದಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕುಕ್ಕವಾಡ ಗ್ರಾಮದಲ್ಲಿ ಶುಗರ್ ಕಂಪನಿ, ನಗರದ ಲಕ್ಷ್ಮೀ ಪೆÇ್ಲೀರ್ ಮಿಲ್ ಹಾಗೂ ಶ್ರೀ ಆಂಜನೇಯ ಕಾಟನ್ ಮಿಲ್‍ನ ಕಾರ್ಮಿಕರಿಗೆ ಮತದಾನದ ಪ್ರತಿಜಾÐ ವಿಧಿ ಭೋದಿಸುವುದರ ಮೂಲಕ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮತದಾನ ದಿನದಂದು ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ಇರಲಿದ್ದು ಮತದಾನ ಮಾಡಬೇಕು. ಯಾವುದೇ ಮಾಲಿಕರು ಮತದಾನ ದಿನದಂದು ಕಾರ್ಮಿಕರಿಗೆ ರಜೆ ನಿರಾಕರಣೆ ಮಾಡುವಂತಿಲ್ಲ ಮತ್ತು ವೇತನವನ್ನು ನೀಡಬೇಕಾಗುತ್ತದೆ. ಈ ಬಗ್ಗೆ ಎಲ್ಲಾ ಕಾರ್ಮಿಕರು ತಿಳಿದುಕೊಂಡು ರಜೆ ಪಡೆದು ಮನೆಯಲ್ಲಿರದೆ ಮತದಾನ ಹಬ್ಬದಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ತಾವು ಸಹ ಕೈಜೋಡಿಸಬೇಕೆಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಹಿಟ್ನಾಳ್, ಮುಖ್ಯ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.