ವಿಧಾನಸಭಾ ಚುನಾವಣೆಯಲ್ಲಿ ೧೩೦ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ

ರಾಯಚೂರು,ಜ.೨೦ – ರಾಜ್ಯ ಬಿಜೆಪಿ ಸರ್ಕಾರ ಜನರ ವಿಶ್ವಾಸಗಳಿಸುವಂತ ಕೆಲಸ ಮಾಡುತ್ತಿದೆ ಉಳಿದ ಪಕ್ಷಗಳ ಬೀತಿ ಯಾವುದು ಇಲ್ಲ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೧೩೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೆವೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಬಳ್ಳಾರಿಯಲ್ಲಿ ನಡೆದಿರುವ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಬಳ್ಳಾರಿಯಲ್ಲಿ ನಡೆಯುವ ಐಟಿರೆಡಗೆಲ್ಲ ರಾಮುಲು ಅವರನ್ನು ಜೊಡಿಸುವುದು ಬೇಕಿಲ್ಲ.ಸಿಂಧನೂರಿನಲ್ಲಿ ನಡೆಸಿದ ಸಮಾವೇಶದ ಬಗ್ಗೆ ಪೋಟೋ ಪೇಸ್ ಬುಕ್, ಇನ್ ಸ್ಟಾಗ್ರಾಮನಲ್ಲಿ ನಾನು ಶೇರ್ ಮಾಡಿಲ್ಲ ಅದು ಎಲ್ಲೊ ಒಂದು ಕಡೆ ಯಾಕ್ ಆಗುದ್ದು, ಅದನ್ನು ಸರಿಪಡಿಸುವಂತೆ ಪೋಲಿಸರಿಗೆ ತಿಳಿಸಿದ್ದೆನೆ ಎಂದರು.
ಜನಾರ್ದನ ರೆಡ್ಡಿಯವರನ್ನು ಹುಟ್ಟು ಹಬ್ಬದಿನದಂದು ರಹಸ್ಯವಾಗಿ ಬೇಟಿಯಾಗಿದ್ದಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜನಾರ್ದನ ರೆಡ್ಡಿಯವರನ್ನು ರಹಸ್ಯವಾಗಿ ಬೇಟಿ ಯಾಕೆ ಯಾಗಬೆಕು ಒಪನ್ ಆಗಿ
ಬೇಟಿಯಾಗುತ್ತೆನೆ, ನಾನು ಯಾಕೆ ಬೇಟಿಯಾಗ ಬಾರದು ನಾನು ಬೇಟಿ ಆಗೊದರಿಂದ ಎನಾಗೊದಿದೆ, ಬೇಟಿ ಆಗ್ಲೆ ಬಾರದಾ, ಎಲ್ಲೊ ಕಾರ್ಯಕ್ರಮದಲ್ಲಿ ಬೇಟಿಯಾಗಿ ಮಾತನಾಡಿದರೆ ರಾಜಕೀಯ ಮಾತನಾಡಿದ್ರು ಎಂದು ಊಹಿಸಿಕೊಳ್ಳಬಾರದು ಎಂದರು.
ಬಿಜೆಪಿ ಪಕ್ಷ ಸಿದ್ದಾಂತ ಪಕ್ಷ ಅದರ ಮೇಲೆ ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ.ಜನಾರ್ದನ ರೆಡ್ಡಿ ಮುಂಚೆ ಯಿಂದಲು ಪರಿಚಯಸ್ದರು ಈಗ ಅವರು ಬೇರೆ ಪಕ್ಷ ಕಟ್ಟಿರುವ ಕಾರಣ ಬಿಜೆಪಿ ಪಕ್ಷ ಸಿದ್ದಾಂತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಇದ್ದರು.