ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಬೆಂಬಲಿಸಿ – ಮುಖ್ಯಮಂತ್ರಿ ಚಂದ್ರು

ರಾಯಚೂರು,ಮಾ.೨೫- ಜೆಡಿಎಸ್,ಕಾಂಗ್ರೆಸ್,ಬಿಜೆಪಿ(ಜೆಸಿಬಿ) ಪಕ್ಷಗಳ ಕಾರ್ಯವೈಖರಿಯನ್ನು ನೋಡಿದ್ದೀರಿ.೦% ಭ್ರಷ್ಟಾಚಾರ ಆಡಳಿತಕೊಡುತ್ತಿರುವ ಎಎಪಿ ಪಕ್ಷವನ್ನು ನೋಡುತ್ತಿದ್ದೀರಿ.ಹಾಗಾಗಿ ಜೆಸಿಬಿ ಪಕ್ಷಗಳನ್ನು ತಿರಸ್ಕರಿಸಿ; ಎಎಪಿ ಬೆಂಬಲಿಸಿ ಎಂದು ಎಎಪಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೫೫ ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ? ಎಂದು ಪ್ರಶ್ನಿಸಿದ ಅವರು ನಿರಂಕುಶ ಆಡಳಿತ ಮಾದರಿ ಆಡಳಿತ ನೀಡುತ್ತಿರುವ ಬಿಜೆಪಿ ಪಕ್ಷ ವಿರೋಧಿಗಳನ್ನು ವಿಶೇಷವಾಗಿ ಎಎಪಿ ಪಕ್ಷದ ಮುಖಂಡರಾದಿಯಾಗಿ ವಿರೋಧಪಕ್ಷಗಳ ಮುಖಂಡರ ಮೇಲೆ ಸ್ವಾಯತ್ತ ಸಂಸ್ಥೆಗಳಾದ ರಾ, ಸಿಬಿಐ, ಸೇರಿದಂತೆ ವಿವಿಧ ಸರಕಾರಿ ಸಂಸ್ಥೆಗಳಿಂದ ಕಿರುಕುಳ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇನ್ನು ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಹೆಸರಾಗಿದೆ ಹೀಗಾಗಿ ಈ ಮೂರು ಪಕ್ಷಗಳನ್ನು ತಿರಸ್ಕರಿಸಿ ನಾವು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟ ಪರಿಣಾಮ ದೆಹಲಿ ಹಾಗೂ ಪಂಜಾಬ್ ನಲ್ಲಿ ಅಧಿಕಾರದಲ್ಲಿದ್ದು, ಗುಜರಾತ್ ನಲ್ಲಿ ನಮ್ಮ ಶಕ್ತಿಪ್ರದರ್ಶಿಸಿದ್ದೇವೆ. ಗೋವಾದಲ್ಲಿ ಅಸ್ತಿತ್ವ ಕಂಡುಕೊಂಡಿದ್ದೇವೆ. ಈಗ ದಕ್ಷಿಣದಲ್ಲಿ ಖಾತೆ ತೆರೆಯುವ ಇಲ್ಲವೇ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವು ಪಯತ್ನ ಮಾಡುತ್ತಿದ್ದೇವೆ. ಮತದಾರ ಪ್ರಭುಗಳು ನಮಗೆ ಆಶೀರ್ವದಿಸಬೇಕೆಂದು ಕೋರಿದರು.
ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹಗೊಳಿಸಿರುವ ಕ್ರಮಕ್ಕೆ ತೀವ್ರ ವಿರೋಧವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಸರಕಾರ ನಡೆದುಕೊಳ್ಳುವ ರೀತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ವಿಜಯಶರ್ಮಾ, ರುದ್ರಯ್ಯ ನವಲಿ ಹಿರೇಮಠ, ಜಿಲ್ಲಾಧ್ಯಕ್ಷ ಕೆ.ಬಸವರಾಜ ಗುತ್ತೇದಾರ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಡಾ. ಸುಭಾಷಚಂದ್ರ ಸಂಬಾಜಿ, ನಗರ ಅಭ್ಯರ್ಥಿ ಡಿ.ವೀರೇಶ ಕುಮಾರ ಇದ್ದರು.