ವಿಧಾನಸಭಾ ಚುನಾವಣೆ:ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕ

ಕಲಬುರಗಿ.ಏ.13:ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನೇಮಿಸಲಾದ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ವಿವರ ಹಾಗೂ ವಿಧಾನಸಭಾವಾರು ಚುನಾವಣಾಧಿಕಾರಿಗಳ ಕಚೇರಿ ವಿಳಾಸದ ವಿವರ ಇಂತಿದೆ.

34-ಅಫಜಲಪುರ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ (ಮೊಬೈಲ್ ಸಂಖ್ಯೆ 9686397868) ಹಾಗೂ ಸಹಾಯಕ ಚುನಾವಣಾಧಿಕಾರಿ-ಅಫಜಲಪುರ ತಹಶೀಲ್ದಾರ ಸಂಜೀವ ಕುಮಾರ ದಾಸರ (ಮೊಬೈಲ್ ಸಂಖ್ಯೆ 9972951095). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ತಹಶೀಲ್ದಾರರ ಕಾರ್ಯಾಲಯ, ತಾಲೂಕು ಆಡಳಿತ ಸೌಧ, ಅಫಜಲಪುರ.
35-ಜೇವರ್ಗಿ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಾಂತಗೌಡ ಜಿ. ಗುಣಕಿ (ಮೊಬೈಲ್ ಸಂಖ್ಯೆ 7026937930) ಹಾಗೂ ಸಹಾಯಕ ಚುನಾವಣಾಧಿಕಾರಿ-ಜೇವರ್ಗಿ ತಹಶೀಲ್ದಾರ ರಾಜೇಶ್ವರಿ (ಮೊಬೈಲ್ ಸಂಖ್ಯೆ 9599144145). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ತಹಶೀಲ್ದಾರರ ಕಾರ್ಯಾಲಯ, ತಾಲೂಕು ಆಡಳಿತ ಸೌಧ, ಜೇವರ್ಗಿ.
40-ಚಿತ್ತಾಪುರ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನಕುಮಾರ್ (ಮೊಬೈಲ್ ಸಂಖ್ಯೆ 9880626689). ಸಹಾಯಕ ಚುನಾವಣಾಧಿಕಾರಿ-ಚಿತ್ತಾಪುರ ತಹಶೀಲ್ದಾರ ಸೈಯದ್ ಪಾಷಾವಲಿ (ಮೊಬೈಲ್ ಸಂಖ್ಯೆ 9480729540). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ತಹಶೀಲ್ದಾರರ ಕಾರ್ಯಾಲಯ, ತಾಲೂಕು ಆಡಳಿತ ಸೌಧ, ಚಿತ್ತಾಪುರ.
41-ಸೇಡಂ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಸೇಡಂ ಸಹಾಯಕ ಆಯುಕ್ತ ಕಾರ್ತಿಕ ಎಂ. (ಮೊಬೈಲ್ ಸಂಖ್ಯೆ 7024222308) ಹಾಗೂ ಸಹಾಯಕ ಚುನಾವಣಾಧಿಕಾರಿ ಸೇಡಂ ತಹಶೀಲ್ದಾರ ಶಿವರಾಜ್ (ಮೊಬೈಲ್ ಸಂಖ್ಯೆ 8884769610). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ಸಹಾಯಕ ಆಯುಕ್ತರ ಕಚೇರಿ, ಸೇಡಂ.
42-ಚಿಂಚೋಳಿ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಮದಾರ್ (ಮೊಬೈಲ್ ಸಂಖ್ಯೆ 9448999235) ಹಾಗೂ ಸಹಾಯಕ ಚುನಾವಣಾಧಿಕಾರಿ-ಚಿಂಚೋಳಿ ತಹಶೀಲ್ದಾರ ವಿ.ಎ. ಮುಳಗುಂದ ಮಠ (ಮೊಬೈಲ್ ಸಂಖ್ಯೆ 9448515659). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ತಹಸೀಲ್ದಾರರ ಕಚೇರಿ ಚಿಂಚೋಳಿ.
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಸಹಾಯಕ ಆಯುಕ್ತೆ ಮಮತಾ ಕುಮಾರಿ (ಮೊಬೈಲ್ ಸಂಖ್ಯೆ 9964105414) ಹಾಗೂ ಸಹಾಯಕ ಚುನಾವಣಾಧಿಕಾರಿ-ಕಲಬುರಗಿ ತಹಶೀಲ್ದಾರ ಮಧುರಾಜ್ (ಮೊಬೈಲ್ ಸಂಖ್ಯೆ 9916681192). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ಸಹಾಯಕ ಆಯುಕ್ತರ ಕಾರ್ಯಾಲಯ, ಕಲಬುರಗಿ.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ಪ್ರಕಾಶ ರಜಪೂತ (ಮೊಬೈಲ್ ಸಂಖ್ಯೆ 7760265920) ಹಾಗೂ ಸಹಾಯಕ ಚುನಾವಣಾಧಿಕಾರಿ-ಕಲಬುರಗಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ಅವಿನಾಶ ನಾಯಕ (ಮೊಬೈಲ್ ಸಂಖ್ಯೆ 8618534687). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ಮಹಾನಗರ ಪಾಲಿಕೆ ಕಾರ್ಯಾಲಯ, ಕಲಬುರಗಿ.
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ ದೇವಿದಾಸ್ (ಮೊಬೈಲ್ ಸಂಖ್ಯೆ 8073342829) ಹಾಗೂ ಸಹಾಯಕ ಚುನಾವಣಾಧಿಕಾರಿ-ಕಲಬುರಗಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಎಚ್.ಕ್ಯೂ.ಎ.ಯವರಾದ ಮಧುಮತಿ ಪಾಟೀಲ (ಮೊಬೈಲ್ ಸಂಖ್ಯೆ 8277931579). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ಮಹಾನಗರ ಪಾಲಿಕೆ ಕಾರ್ಯಾಲಯ, ಕಲಬುರಗಿ.
46-ಆಳಂದ ವಿಧಾನಸಭಾ ಕ್ಷೇತ್ರ:-ಚುನಾವಣಾಧಿಕಾರಿ-ಕಲಬುರಗಿ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುಳಗುಂದ (ಮೊಬೈಲ್ ಸಂಖ್ಯೆ 9742971570) ಹಾಗೂ ಸಹಾಯಕ ಚುನಾವಣಾಧಿಕಾರಿ-ಆಳಂದ ತಹಶೀಲ್ದಾರ ಪ್ರದೀಪ ಹಿರೇಮಠ (ಮೊಬೈಲ್ ಸಂಖ್ಯೆ 8073688515). ಚುನಾವಣಾಧಿಕಾರಿಗಳ ಕಚೇರಿ ವಿಳಾಸ ತಹಶೀಲ್ದಾರರ ಕಾರ್ಯಾಲಯ, ಆಳಂದ.