ವಿಧಾನಸಭಾ ಚುನಾವಣೆಗೆ ಸ್ಪರ್ಧೆ: ಪಾಪಾರೆಡ್ಡಿ ಭೇಟಿಯಾದ ಸುಮಾ ಅಶೋಕ ಗಸ್ತಿ

ರಾಯಚೂರು,ಜ.೦೫- ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಸಂಬಂಧಿಸಿದಂತೆ ಇಂದು ಮಾಜಿ ಶಾಸಕರಾದ ಪಾಪಾರೆಡ್ಡಿರವರ ಮನೆಗೆ ಮಾಜಿ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ದಿ. ಅಶೋಕ ಗಸ್ತಿರವರ ಪತ್ನಿ ಸುಮಾ ಅಶೋಕ ಗಸ್ತಿ ಭೇಟಿ ನೀಡಿ ರಾಜಕೀಯ ಸಮಾಲೋಚನೆ ನಡೆಸಿದರು.
ಹಿಂದುಳಿದ ವರ್ಗಗಳ ಮತಗಳೇ ಅತ್ಯಧಿಕವಾಗಿ ಇರುವ ರಾಯಚೂರು ನಗರ ಕ್ಷೇತ್ರದಲ್ಲಿ ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ಆಗಿರುವುದರಿಂದ, ಹಾಗೂ ಅಶೋಕ ಗಸ್ತಿರವರು ಬಿಜೆಪಿಯಲ್ಲಿ ಬಹಳ ವರ್ಷ ದುಡಿದಿದ್ದಾರೆ. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಲು ನಮಗೆ ಅವಕಾಶ ಕೊಟ್ಟರೆ ಮಾಡಿಕೊಂಡು ಹೋಗುತ್ತೇವೆ. ಹೀಗಾಗಿ ತಮ್ಮ ಬೆಂಬಲ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪಾಪಾರೆಡ್ಡಿರವರು ಅಶೋಕ ಗಸ್ತಿರವರು ನಮ್ಮ ಜೊತೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.ನಾವೆಲ್ಲರೂ ಒಂದೇ, ಹಾಗಾಗಿ ನಮ್ಮ ಬೆಂಬಲ ಇದೆ, ಬರುವಂತಹ ದಿನಗಳಲ್ಲಿ ಪಕ್ಷ ಏನು ತೀರ್ಮಾನ ಮಾಡಲಿದೆ ಕಾದು ನೋಡೊಣ ಎಂದರು.