ವಿಧಾನಸಭಾ ಕ್ಷೇತ್ರವಾರು ಜರುಗುವ : ತರಬೇತಿಗೆ ಕಡ್ಡಾಯವಾಗಿ ಹಾಜರಾಗಲು ಸೂಚನೆ

ಯಾದಗಿರಿ : ಏ.30 : 2023ರ ಮೇ 2ರ ಮಂಗಳವಾರ ರಂದು ವಿಧಾನಸಭಾ ಕ್ಷೇತ್ರವಾರು ಪಿಆರ್‍ಓ, ಎಪಿಆರ್‍ಓ, ಪಿಓ ತರಬೇತಿಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಲುವಾಗಿ ಈ ಕಾರ್ಯಾಲಯದಿಂದ ಈಗಾಗಲೇ 2023ರ ಮೇ 02 ರಂದು ಚುನಾವಣೆ ತರಬೇತಿ ದಿನಾಂಕ ನಿಗಧಿಗೊಳಿಸಿ ಆದೇಶಗಳನ್ನು ಈಗಾಗಲೇ ಜಾರಿ ಮಾಡಲಾಗಿರುತ್ತದೆ ಈ ಆದೇಶದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು (ಪಿಆರ್‍ಓ, ಎಪಿಆರ್‍ಓ, ಪಿಓ) ಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.