ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ

ಮಾನ್ವಿ,ಮಾ.೩೧- ೨೦೨೩ ಮಾರ್ಚ್ ಅಂತ್ಯಕ್ಕೆ ೧೧೨೯೫೬ ಪುರುಷ ಹಾಗೂ ೧೧೭೭೦೩ ಮಹಿಳೆಯರು ಮತ್ತು ೬೪ ತೃತೀಯ ಲಿಂಗಿಗಳು ಸೇರಿ ಒಟ್ಟು ೨೩೦೭೨೩ ಮತದಾರರು ಮತದಾನದ ಪಟ್ಟಿಯಲ್ಲಿ ನೊಂದಾಯಿಸಿ ಕೊಂಡಿದ್ದಾರೆ ಹಾಗೂ ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿ ಒಟ್ಟು ೨೭೬ ಮತಗಟೆಗಳಲ್ಲಿ ಅಗತ್ಯವಾದ ಮೂಲಭೂತಸೌಲಭ್ಯಗಳನ್ನು ಕಲ್ಪಿಸಲಾಗಿದೆ.
೪೭ ಮತಗಟ್ಟೆಗಳನ್ನು ಸೂಕ್ಷ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಚುನಾವಣೆ ಅಧಿಕಾರಿ ಪ್ರಕಾಶ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ -೨೦೨೩ರ ಅಂಗವಾಗಿ ಚುನಾವಣ ನೀತಿ ಸಂಹಿತೆ ಕುರಿತು ಪತ್ರಿಕಾ ಗೋಷ್ಠಿ ಕರೆದು ಮಾತಾನಾಡಿದ ಅವರು ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದ್ದು ಏ.೧೩ರಂದು ಗೆಜೇಟ್ ನೋಟಿಪಿಕೇಶನ್ ಹೋರಾಡಿಸಲಾಗುವುದು.
ಏ.೨೦ ನಾಮಪತ್ರಸಲ್ಲಿಸಲು ಕೊನೆಯದಿನವಾಗಿದ್ದು, ಏ.೨೧ರಂದು ನಾಮಪತ್ರಗಳನ್ನು ಪರಿಶೀಲನೆ ಮಾಡಲಾಗುವುದು ಏ. ೨೪ ರಂದು ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿದ್ದು ಮೇ.೧೦ ರಂದು ಚುನಾವಣೆ ನಡೆಯಲಿದ್ದು ಮೇ೧೩ರಂದು ಮತ ಏಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುವುದು.
ನಾಮಪತ್ರ ಸ್ವೀಕೃತಿಯ ಕೊನೆಯ ದಿನಾಂಕದವರೆಗೂ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆ,ತಿದ್ದುಪಡಿ,ತೆಗೆದು ಹಾಕಲು ಅನುಕೂಲ ಮಾಡಿಕೊಡಲಾಗುವುದು.
ಕವಿತಾಳ,ದೇವದುರ್ಗ ಕ್ರಾಸ್,ರಾಯಚೂರು ಮುಖ್ಯರಸ್ತೆಯಲ್ಲಿ ಚೆಕ್ ಪೋಸ್ಟ್ಗಳನ್ನು ಪ್ರಾರಂಭಿಸಿ ಕ್ಷೇತ್ರಕ್ಕೆ ಅಕ್ರಮವಾಗಿ ಸರಬರಾಜು ಆಗುವ ಹಣ,ವಸ್ತು,ಮದ್ಯ ಸೇರಿ ದಾಖಲೆ ಇಲ್ಲಾದೆ ಸಾಗಟ ಮಾಡುವ ವಹಾನಗಳನ್ನು ತಪಾಸಣೆ ನಡೆಸಲಾಗುವುದು ಹಾಗೂ ತೀವ್ರವಾದ ನಿಗಾವಹಿಸಲಾಗುವುದು.
ಈ ಬಾರಿ ಚುನಾವಣ ಅಯೋಗವು ವಿಧಾನಸಭಾ ಕ್ಷೇತ್ರದ ೨೫೭೩ ವಿಶೇಷ ಚೇತನರಿಗೆ ಹಾಗೂ ೮೦ವರ್ಷಮೇಲ್ಪಟ್ಟ ೩೭೨೪ ಒಟ್ಟು ೬೨೯೭ ಮತದಾರರಿಗೆ ಹಾಗೂ ಕೋವಿಡ್ ಸೊಂಕಿನ ಅನುಮಾನಿತರಿಗೆ,ಅತ್ಯವಸರ ಸೇವೆಸಲ್ಲಿಸುವವರಿಗೆ ಮನೆಯಲ್ಲಿಯೇ ಮತವನ್ನು ಹಾಕಲು ಅನೂಕುಲ ಕಲ್ಪಿಸಲಾಗುವುದು.
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಸ್.ಎಸ್.ಟಿ, ಎಫ್.ಎಸ್.ಟಿ.ವಿ.ಎಸ್.ಟಿ, ಸೆಕ್ಟರ್ ಅಧಿಕಾರಿಗಳ ವಿವಿಧ ತಂಡಗಳನ್ನು ರಚಿಸಲಾಗಿದೆ.
ಸಭೆ,ಸಮಾರಂಭ, ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಮಾಡುವವರು ವಿವಿಧ ಇಲಾಖೆಗಳಿಂದ ಪರವಾನಿಗೆಯನ್ನು ಪಡೆಯಲು ಏಕಗವಾಕ್ಷಿ ತಂಡವನ್ನು ತಹಸೀಲ್ದಾರ್ ಕಚೇರಿಯಲ್ಲಿ ರಚಿಸಲಾಗಿದೆ. ಚುನಾವಣೆಗೆ ಸ್ಪರ್ದಿಸುವ ಅಭ್ಯಾರ್ಥಿಗಳ ಖಾತೆಗಳನ್ನು ತೆರೆಯಲಾಗಿದ್ದು ಪ್ರತಿ ಅಭ್ಯಾರ್ಥಿ ೪೦ಲಕ್ಷದವರೆಗೆ ಚುನಾವಣೆಯಲ್ಲಿ ಖರ್ಚುಮಾಡಲು ಅವಕಾಶವಿದ್ದು ಪ್ರತಿನಿತ್ಯ ಖರ್ಚು ವೆಚ್ಚಗಳ ಮಾಹಿತಿಯನ್ನು ಕಚೇರಿಗೆ ನೀಡಬೇಕು ಸಭೆ ನಡೆಸಲು ಪೂರ್ವನುಮತಿ ಪಡೆಯಬೇಕು.
ಸಾರ್ವಜನಿಕರ ಅನುಕೂಲಕ್ಕಾಗಿ ಸಲಹೆ ಮತ್ತು ದೂರುಗಳನ್ನು ನೀಡಲು ಸಹಾಯವಾಣಿ ಕಾಂಟ್ರೋಲ್ ರೂಂ ಕೊಠಡಿಯ ಸಂಖ್ಯೆ ೦೮೫೩೮ ೨೨೦೨೩೯ ಹಾಗೂ ಚುನಾವಣಾಧಿಕಾರಿ ದೂ ಸಂಖ್ಯೆ ೯೪೮೦೮೭೪೦೦೨ಗೆ ಕರೆಮಾಡಿ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ತಹಸೀಲ್ದಾರ್ ಚಂದ್ರಕಾಂತ ಎಲ್.ಡಿ.ಸಿರವಾರ ತಹಸೀಲ್ದಾರ್ ಸುರೇಶವರ್ಮ, ತಾ.ಪಂ.ಎಂ.ಡಿ.ಸೈಯಾದ್ ಪಟೇಲ್ ಇದ್ದರು.