ವಿಧಾನಸಭೆಯಲ್ಲಿ ಸಚಿವ ಸುಧಾಕರ್ ಹೇಳಿಕೆ‌ ಕೋಲಾಹಲ: ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು, ಮಾ 24- ಎಲ್ಲ 224‌ ಶಾಸಕರ ವೈಯಕ್ತಿಕ ‌ಜೀವನದ ಬಗ್ಗೆ ತನಿಖೆ‌‌ ನಡೆಸುವಂತೆ ಹೇಳಿಕೆ ನೀಡಿರುವ ಸಚಿವ ಡಾ.ಸುಧಾಕರ್ ರಾಜೀನಾಮೆಗೆ‌ ಆಗ್ರಹಿಸಿ ಪ್ರತಿಪಕ್ಷ ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿ‌ ಕಲಾಪಕ್ಕೆ ತೀವ್ರ ಅಡ್ಡಿಪಡಿಸಿದ್ದರಿಂದ ಸಭಾಧ್ಯಕ್ಷ ವಿಶ್ವೇಶ್ವರ ಹಗಡೆ ಕಾಗೇರಿ‌ ಕಲಾಪವನ್ನು ಅನಿರ್ದಿಷ್ಟವಧಿಗೆ ಮುಂದೂಡಿಸದರು.
ಭೋಜನ ವಿರಾಮದ ನಂತರ ಕಲಾಪ ಆರಂಭವಾದಾಗ ಸಚಿವ ಸುಧಾಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸುಧಾಕರ್ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ತಮ್ಮ ಹಾಗೂ ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರನ್ಮು ಪ್ರಸ್ತಾಪಿಸಿ 224 ಮಂದಿ ಹರಿಶ್ಚಂದ್ರರಲ್ಲ‌ ಎಂದು ಹೇಳಿಕೆ ನೀಡಿರುವುದಕ್ಕೆ ಆಕ್ರೋಶ‌‌‌ ವ್ಯಕ್ತಡಿಸಿದರು.
224 ಮಂದಿ ಶಾಸಕರುಢ ಸತ್ಯ ಹರಶ್ಚಂದ್ರರಲ್ಲ ಇದು ಹಕ್ಕುಚ್ಯುತಿಯಾಗುತ್ತದೆ ಎಲ್ಲ ಶಾಸಕರ ಬಗ್ಗೆ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.
ಈ ವೇಳೆ ಸುಧಾಕರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಇದು
ವ್ಯಭಿಚಾರಿಗಳ ಸರ್ಕಾರ ಎಂದು ಕಿಡಿಕಾರಿದರು.
ಶಾಸಕ ಆರ್.ವಿ .ದೇಶಪಾಂಡೆ ಮಾತನಾಡಿ, 32 ವರ್ಷಗಳಿಂದಲೂ ಸದನದಲ್ಲಿದ್ದೇನೆ. ಯಾರೂ ಈ‌ ರೀತಿಯ ಹೇಳಿಕೆ ನೀಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.‌ಬೇಜಾಬ್ದಾರಿ ಹೇಳಿಕೆ ನೀಡಿರುವ ಸಚಿವ ಸುಧಾಕರ್ ಕ್ಷಮೆಯಾಚಿಸಬೇಕೆಂದು ಜೆಡಿಎಸ್ ನ ಬಂಡೆಪ್ಪ ಕಾಶೆಂಪುರ್ ಒತ್ತಾಯಿಸಿದರು.
ಈ ಹಂತದಲ್ಲಿ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ವಿಶ್ವೇಶ್ವರ ಹೆಗಡೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.