ವಿಧಾನಪರಿಷತ್ ಚುನಾವಣೆ:ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ

ಸಂಜೆವಾಣಿ ವಾರ್ತೆ
ಸಿರುಗುಪ್ಪ ಡಿ 03 : ಡಿ.10ರಂದು ವಿಧಾನಪರಿಷತ್ ಚುನಾವಣೆಯ ಅಂಗವಾಗಿ ಚುನಾವಣೆ ಆಯೋಗದ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಚುನಾವಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಕಾರ್ಯ ನಡೆಸಬೇಕು ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತಿಳಿಸಿದರು.

     ನಗರದ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ ತಾಲೂಕ ಆಡಳಿತದಿಂದ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿದಲ್ಲಿ ಮಾತನಾಡಿದರು. ಇತರೆ ಚುನಾವಣೆಗಳಿಗಿಂತ ಪರಿಷತ್ ಚುನಾವಣೆ ವಿಭಿನ್ನವಾಗಿದ್ದು, ಇಲ್ಲಿ  ಪ್ರಾಶಸ್ತ್ಯದ ಮತಗಳಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಯಾವುದೇ ಸಮಸ್ಯೆಗಳಾಗದಂತೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ನಡೆಸೋಣ ಎಂದು ಸಲಹೆ ನೀಡಿದರು. 
 ಚುನಾವಣಾ ಪ್ರಕ್ರಿಯೆ ಕುರಿತು ಸಂಪನ್ಮೂಲ ಅಧಿಕಾರಿಗಳಾದ ಬಸವರಾಜ, ಪಂಪನಗೌಡರಿಂದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. 
  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ಪಸುಬೇದಾರ್, ತಾಲೂಕು ಕಚೇರಿಯ ಸಿಬ್ಬಂದಿ ಮತ್ತು ಪಿ.ಆರ್.ಒ ಮತ್ತು ಎ.ಪಿ.ಆರ್.ಒ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.