ವಿಧವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಉದ್ಘಾಟನೆಗೆ ಕರೆಯಲಿಲ್ಲ

ಚಾಮರಾಜನಗರ, ಜೂ.09:- ವಿಧವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಉದ್ಘಾಟನೆಗೆ ಕರೆಯಲಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ಚಾಮರಾಜನಗರದ ಡಾ.ರಾಜ್‍ಕುಮಾರ್ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಸಂಸತ್ ಉದ್ಘಾಟನೆ ದೇಶದ ಶಕ್ತಿ ಕೇಂದ್ರ, ಅದನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ, ಅವರು ವಿಧವೆಯಾದ್ದರಿಂದ ಶುಭಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಹೊರಗಿಟ್ಟರು ಇದನ್ನು ಯಾರೂ ಪ್ರಶ್ನೆಯನ್ನೇ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ, ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ, ಒಬ್ಬರು ಉಪದ್ರವಿ ಲೇಖಕರು ಮತ್ತೊಬ್ಬರು ನಿರುಪದ್ರವಿ ಲೇಖಕರು, ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರುಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ, ಕೆಲವರು ಇರುತ್ತಾರೆ 500 ಕೊಟ್ಟರೆಇತ್ತಕಡೆ, ಜಾಸ್ತಿ ಕೊಟ್ಟರೇ ಅತ್ತಕಡೆ ಎಂಬತವರು, ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಳಸಮುದಾಯದ ಲೇಖಕರು ಹೆಚ್ಚು ಬರಬೇಕು, ಅಂದ-ಚೆಂದದ ಭಾμÉಯಲ್ಲಿ ಬರೆಯುವವರಿಗಿಂತ ದೇಸಿ ಸಾಹಿತಿಗಳು ಬರಬೇಕು, ಒಂದುಗಾದೆ ಮಾತಿದೆ 8 ಹೋಳಿಗೆ ತಿನ್ನುವ ಬದಲು 1 ಎಲುಬು ಕಡಿಅಂತಾ ಆ ರೀತಿ ಎಲುಬು ಎಂದರೆ ತಳಸಮುದಾಯಯವರ ಕೃತಿ, ಹೋಳಿಗೆ ಎಂದರೆ ಪರಿಶುದ್ಧ ಭಾμÉಯಲ್ಲಿ ಬರೆಯುವವರು ಎಂದರು.
ಬಿಜೆಪಿ ಸೋಲಿಸುವ ಮೂಲಕ ಸಾಮಾಜಿಕ ಮೌಲ್ಯ ಎತ್ತಿಹಿಡಿದ ಜನ :
ಮೊನ್ನೆ ಚುನಾವಣೆಯಲ್ಲಿ ಯಾರನ್ನೂ ಸೋಲಿಸಬೇಕೆಂದುಕೊಂಡಿದ್ದೆವೀ ಅವರು ಸೋತಿದ್ದಾರೆ, ಯಾರುಗೆಲ್ಲಬೇಕಿತ್ತೋಅವರಿಗೆ 130ಕ್ಕೂ ಅಧಿಕ ಸ್ಥಾನ ಕೊಟ್ಟುಜನರು ಗೆಲ್ಲಿಸಿದ್ದಾರೆ. ದೆಹಲಿಯಿಂದ ಬಂದರು, ನಟ-ನಟಿಯರನ್ನು ಕರೆತಂದರೂ ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯ ಮಾಡಿದರು.
ಹಣ ಪಡೆದಜನರು ಮೋಸ ಮಾಡಿದರು ಎಂದು ಕೆಲವರು ಹೇಳುತ್ತಿದ್ದರು, ಅವರುಅಧಿಕಾರ ಹಿಡಿದದ್ದೇ ಮೋಸದಿಂದ ಆದ್ದರಿಂದ ಜನರು ಅವರಿಗೆ ಮೋಸ ಮಾಡಲಿಲ್ಲ, ಸಾಮಾಜಿಕ ಮೌಲ್ಯತೋರಿದರು, ಗೆಲ್ಲಿಸುವಜನರಿಗೆ ಸೋಲಿಸುವುದುಗೊತ್ತುಎಂಬುದನ್ನು ಈ ಬಾರಿ ತೋರಿಸಿಕೊಟ್ಟರು ಎಂದು ಹೇಳಿದರು.
ಪಠ್ತಪುಸ್ತಕ ಪರಿಶೀಲನೆ ಮಾಡಿ:
ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ, ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ, ವೈಚಾರಿಕತೆ ಇರಲಿಲ್ಲ, ಪಠ್ಯರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅಧ್ಯಕ್ಷನನ್ನಾಗಿ ಮಾಡಿದ್ದು ನಾಗೇಶ್ ಮಾಡಿದ ಮೊದಲ ತಪ್ಪು ಎಂದು ಕಿಡಿಕಾರಿದರು.
ಹೊಸ ಸರ್ಕಾರ ಬಂದಿದ್ದು ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಪಠ್ಯವನ್ನು ತೆಗೆಯಬೇಕು, ಯಾವ ಪಠ್ಯವನ್ನು ಬೋಧೀಸಬೇಕೆಂದು ಸರ್ಕಾರಕೂಡಲೇ ಸುತ್ತೋಲೆ ಹೊರಡಿಸಿಬೇಕು ಎಂದು ಆಗ್ರಹಿಸಿದರು.
ಭಾರತೀಯತೆ, ಸಂಸ್ಕøತಿ ಪಠ್ಯಕ್ರಮ ಎಂದು ಸುನೀಲ್‍ಕುಮಾರ್ ಹೇಳಿರುವುದು ಅಪಕ್ವ ಹೇಳಿಕೆ, ಭಾರತೀಯತೆ ಎಂದರೆ ಸಮಗ್ರತೆ, ಎಲ್ಲರ ನ್ನೂ ಒಳಗೊಳ್ಳುವ ಸಮಗ್ರತೆ, ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು, ಆರ್‍ಎಸ್‍ಎಸ್ ಪ್ರಣೀತ ಭಾರತೀಯತೆಯಲ್ಲ, 1.5% ಜನರ ಭಾರತೀಯತೆ ಅಲ್ಲ ಎಂದು ತಿರುಗೇಟುಕೊಟ್ಟರು.