ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯದ್ದಲ್ಲ.        

ದಾವಣಗೆರೆ, ಜೂ. 2;   ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯದ್ದಲ್ಲ. ಶಿಕ್ಷಣದಿಂದ ಏನೆಲ್ಲಾ ಸಾಧನೆ ಮಾಡಬಹುದು ಎಂದು ಆವರಗೊಳ್ಳ ಪುರವರ್ಗಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಮಾತೃದೇವೋ ಸಮಾಜ ಕಲ್ಯಾಣ ಹಾಗೂ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಸಂಸ್ಥಾಪಕ  ಪೋತಲ್ ಶ್ರೀನಿವಾಸ್ ಜನ್ಮದಿನಾಚರಣೆ ಹಾಗೂ ಸಂಸ್ಥೆಯ ತೃತೀಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಕ್ಕಳು ತಂದೆ,ತಾಯಿ, ಗುರು ಹಿರಿಯರಿಗೆ ಗೌರವಿಸಬೇಕು. ವಿದ್ಯೆ ಕಲಿಯುವ ಜೊತೆಗೆ ವಿನಯವಂತರಾಗಬೇಕೆಂದು ಹಿತನುಡಿದರು.ಶ್ರೀನಿವಾಸ್ ತಮ್ಮ ಜನ್ಮದಿನವನ್ನು ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಧ ಮಕ್ಕಳಿಗೆ ದಾಸೋಹ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ವಿಶೇಷ ಎಂದರು.ಟ್ರಸ್ಟ್ ಸೇವಾ ಕಾರ್ಯ ಶ್ಲಾಘನೀಯ. ಇನ್ನು ಸಮಾಜಮುಖಿ ಕಾರ್ಯಗಳ ಮೂಲಕ ಟ್ರಸ್ಟ್ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.  ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ,  ಮಕ್ಕಳು ಕೇವಲ ಅಂಕಗಳಿಕೆಗೆ ಸೀಮಿತ ವಾಗದೆ, ಜೀವನ ಶಿಕ್ಷಣದ ಕಡೆ ಒತ್ತು ಕೊಡಬೇಕು. ಪೋಷಕರು ಸಹ ಬರೀ ಇಂಜಿನಿಯರ್, ಡಾಕ್ಟರ್ ಆಗಿ ಎಂದು ಒತ್ತಡ ಹಾಕಬಾರದು. ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಬೇಕು. ಸಮಾಜದಲ್ಲಿ ಸಾಕಷ್ಟು ಸೇವಾ ಕ್ಷೇತ್ರಗಳಿವೆ. ಉತ್ತಮ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವಂತರಾಗಿ,  ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಬದುಕು ಸಾಗಲಿ ಎಂದು ಹಾರೈಸಿ,  ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಸೇವಾ ಕಾರ್ಯ ಶ್ಲಾಘನೀಯ. ಸಂಸ್ಥಾಪಕ ಪೋತಲ್  ಶ್ರೀನಿವಾಸ್ ಅವರ ಜನಪರ ಕಾಳಜಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಉತ್ತೇಜಿಸುತ್ತಿರುವುದು ಪ್ರಶಂಸನೀಯ ಎಂದರು.ಈ ಸಂದರ್ಭದಲ್ಲಿ  ನಿಕಟಪೂರ್ವ ಭಾಜಪ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್,  ದೇವರಮನಿ ಶಿವಕುಮಾರ್,ಗಂಗಾಧರ್ ಜಿ.ವಿ, ಟ್ರಸ್ಟ್ ಸಂಸ್ಥಾಪಕರಾದ ಪೋತಲ್ ಶ್ರೀನಿವಾಸ್, ಜಿ.ಎಸ್. ಪರಶುರಾಮ್  ಡಾ ‌. ಪುಷ್ಪಾ,  ಶ್ರೀಮತಿ ಸುಹಾಸಿನಿ ಭಟ್,  ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಲಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು