ವಿದ್ಯೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ

ಕಮಲಾಪೂರ:ಸೆ.22:ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸತತ ಅಧ್ಯಯನದ ಮೂಲಕ ಗುರಿ ಸಾಧನೆಯೆಡಗೆ ಸಾಗಬೇಕು, ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್‍ನಂತಹವರು ಹಲವಾರು ಸೋಲುಗಳ ನಂತರ ಗೆಲುವು ಪಡೆದು ಯಶಸ್ವಿಯಾಗಿದ್ದಾರೆ, ಪರೀಕ್ಷೆಯಲ್ಲಿ ಫೇಲಾದಾಗ ಆತ್ಮಹತ್ಯೆಗೆ ಮುಂದಾಗುವುದು ಹೇಡಿತನ, ಸತ್ತು ಅಂತ್ಯ ಕಾಣುವುದಕಿಂತ ಇದ್ದು ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು, ತಂದೆ ತಾಯಿಯರ ಕನಸು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆಕಸಾಪ ಸಂಘ ಸಂಸ್ಥೆ ಜಿಲ್ಲಾ ಪ್ರತಿನಿಧಿ ಕಲ್ಯಾಣಕುಮಾರ ಶಿಲವಂತ
ಕಮಲಾಪುರದ ಸರಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಘಟಕದ ವತಿಯಿಂದ ಹೈದ್ರಾಬಾದ ನಿಜಾಮನ ದುರಾಡಳಿತದಿಂದ ಮುಕ್ತಿ ಪಡೆದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಕಲ್ಯಾಣ ಕರ್ನಾಟಕೋತ್ಸವ ನಿಮಿತ್ತ ಕಲ್ಯಾಣ ಶಿಕ್ಷಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಟ್ಟು ಉಚಿತ, ಸಾವು ಖಚಿತ ಇವೆರಡರ ಮಧ್ಯದಲ್ಲಿರುವ ಜೀವನ ಸಾಮಾಜಿಕ ಸೇವೆ, ಕನ್ನಡ ನಾಡು ನುಡಿ ರಕ್ಷಣೆಗಾಗಿ ಶ್ರಮಿಸುವ ಮೂಲಕ ಜೀವನ ಸಾರ್ಥಕಗೊಳಿಸೇಕು ಎಂದರು.
ಕಮಲಾಪುರ ತಹಶೀಲ್ದಾರ ಸುರೇಶ ವರ್ಮಾ ಮಾತನಾಡಿ ಸಾಧನೆ ನಿನ್ನದಾದರೆ ಸಕಲವು ನಿನ್ನದೆ, ಇಂದಿನ ಯುವಕರೇ ನಾಳೆ ನಾಡಿನ ಪ್ರಜೆಗಳು, ಕನ್ನಡದ ಮೊಟ್ಟ ಮೊದಲ ವ್ಯಾಕರಣ ಗ್ರಂಥವಾದ ಕವಿರಾಜ ಮಾರ್ಗವನ್ನು ನೀಡಿದ ಹೆಮ್ಮೆಯ ನಾಡು ನಮ್ಮದು, ಈ ನೆಲದಲ್ಲಿ ಸಾಹಿತ್ಯದ ಸುವಾಸನೆಯ ಕಂಪಿದೆ, ದೇಶದಲ್ಲಿ ಹಲವಾರು ಭಾಷೆಗಳಿವೆ, ಆದರೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನು ಪಡೆದ ಕೀರ್ತಿ ಕನ್ನಡ ಭಾಷೆಗಿದೆ, ನಮಗೆ ನಮ್ಮ ನಾಡು, ನುಡಿಯ ಬಗ್ಗೆ ಹೆಮ್ಮೆ ಮತ್ತು ಗೌರವಿರಬೇಕು, ಸರಕಾರಿ ಕಾಲೇಜು ಎಂಬ ಕೀಳರಿಮೆ ಬೇಡ, ಏಕೆಂದರೆ ಹಲವಾರು ಸಾಧಕರು ಓದಿದ್ದು ಸರಕಾರಿ ಶಾಲೆಯಲ್ಲಿಯೇ ಎಂಬುದು ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿತ್ತ ನಿರಂತರ ಚಟುವಟಿಕೆಗಳನ್ನು ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕೆಲವೇ ಜನರ ಪರಿಷತ್ತಲ್ಲ, ಅದು ಜನಸಾಮಾನ್ಯರ ಪರಿಷತ್ತಾಗಿಸಲು ಶರಮಿಸುತ್ತಿದ್ದೇವೆ, ಅಕ್ಟೋಬರ ಕೊನೆಯ ವಾರದಲ್ಲಿ ತಾಲೂಕಿನ ಡೊಂಗರಗಾಂವದಲ್ಲಿ ಸಾಹಿತ್ಯ ಗ್ರಾಮೋತ್ಸವ ಹಮ್ಮಿಕೊಳ್ಳಲಿದ್ದೇವೆ ,
ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ನರೋಣಾ, ಪಿಯು ಕಾಲೇಜಿನ ಉಪನ್ಯಾಸಕ ಯಲ್ಲಪ್ಪ ತಳವಾರ, ಸುಭಾಶ್ಚಂದ್ರ ಜಾಧವ, ಡಾ.ರಾಕೇಂದ್ರಕುಮಾರ, ಅಂಬಾರಾಯ ಮಡ್ಡೆ, ಕೃಷ್ಣಮೂರ್ತಿ, ಎಚ್ ಎಸ್ ಬೇನಾಳ, ಡಾ.ಕಲ್ಪನಾ, ಶ್ರೀದೇವಿ ಖಮರುದ್ದಿನ, ಭೀಮರಾವ, ಇತರರು ಇದ್ದರು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಸುರೇಶ ಲೇಂಗಟಿ ಸ್ವಾಗತಿಸಿದರು, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ರವೀಂಧ್ರ ಬಿಕೆ ನಿರೂಪಿಸಿದರು, ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ ವಂದಿಸಿದರು.

ಸಾಮಾಜಿಕ ನ್ಯಾಯದ ನೆಲಗಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡ ನೆಲ, ಜಲ, ಕಲೆ, ಐತಿಹಾಸಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಜಿಲ್ಲಾ ಕಸಾಪದಿಂದ ನಿರಂತರ ಚಾಲ್ತಿಯಲ್ಲಿದೆ, ಮುಂಬರುವ ದಿಗಳಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆಗಳನನು ಮಾಡುವ ಮೂಲಕ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇನೆ…ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷರು ಕಸಾಪ ಕಲಬುರಗಿ

ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ನನ್ನ ಮೇಲೆ ಭರವಸೆಯನಿಟ್ಟು ಕಮಲಾಫುರ ತಾಲೂಕು ಘಟಕದ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ, ಅವರ ಭರವಸೆ ಹುಸಿಯಾಗದಂತೆ ತಾಲೂಕಿನ ವ್ಯಾಪ್ತಿಯಲ್ಲಿನಿರಂತರ ಕಾರ್ಯಕ್ಕರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕೆಂಬಾಳೆ ಖ್ಯಾತಿಯ ಕಮಲಾಪುರದಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ….ಸುರೇಶ ಲೇಂಗಟಿ, ನೂತನ ಅಧ್ಯಕ್ಷರು ಕಸಾಪ ಕಮಲಾಪುರ