
ಕಲಬುರಗಿ: ಸೆ.9:ವಿದ್ಯೆ ಯಾರೂ ಕದಿಯಲಾಗದ ಆಸ್ತಿ ಎಂದು ಶಿಕ್ಷಣತಜ್ಞ ದೇವಿಂದ್ರ ವಿಶ್ವಕರ್ಮ ಹೇಳಿದರು. ಅವರು ಜೇವರ್ಗಿ ನಗರದ ಜಗದ್ಗುರು ತೋಂಟದಾರ್ಯ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯೆ ಕೆಲಸ ಮಾಡಿ ಗಳಿಸಿಕೊಳ್ಳೋದಲ್ಲ. ಅದನ್ನು ಗುರುಗಳಿಂದ ಹಾಗೂ ಶೈಕ್ಷಣಿಕ ವ್ಯವಸ್ಥೆಯಿಂದ ಪಡೆಯೋದು. ಅಂತಹ ವಿದ್ಯೆಯನ್ನು ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಜೀವನದಲ್ಲಿ ಏನನ್ನಾದರೂ ಸಂಪಾದಿಸಬಹುದು. ಆದರೆ, ವಿದ್ಯೆ ಸಂಪಾದಿಸಲು ಆಗುವುದಿಲ್ಲ. ಅದನ್ನು ನಾವು ಪಡೆಯಬೇಕಷ್ಟೆ. ಹಣ, ಒಡವೆ, ಸಂಪತ್ತು ಕೊನೆಗೆ ಸುಖವನ್ನು ಗಳಿಸಿಕೊಳ್ಳಬಹುದು. ಆದರೆ, ಅದೆಲ್ಲವೂ ಕ್ಷಣಿಕ. ವಿದ್ಯೆ ಕ್ಷಣಿಕವಲ್ಲ, ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ನಮಗೆ ಮಾರ್ಗದರ್ಶನ ಮಾಡುತ್ತದೆ. ಅದನ್ನು ನಮ್ಮಿಂದ ಯಾರೂ ಕದಿಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ವ್ಯರ್ಥ ಕಾಲಹರಣ ಮಾಡುವುದಕ್ಕಿಂತ ವಿದ್ಯೆಯನ್ನು ಪರಿಶ್ರಮದಿಂದ ಪಡೆದುಕೊಳ್ಳಬೇಕು. ಸಾಕ್ಷರತಾ ಯೋಜನೆಯನ್ನು ಸಾಂಸ್ಕøತಿಕವಾಗಿ ಪ್ರಯತ್ನಿಸಿ ಬೀದಿ ನಾಟಕ, ಜಾನಪದ ಕಲೆಗಳು ಇತ್ಯಾದಿಗಳ ಮೂಲಕ ಪ್ರತಿಬಿಂಬಿಸಿವೆ. ಇತ್ತೀಚೆಗೆ ವಯಸ್ಕರ ಶಿಕ್ಷಣ, ಬಾಲಿಕಾ ಶಿಕ್ಷಣ, ಚಿಣ್ಣರ ಅಂಗಳ, ಅಕ್ಷರ ಸೇನೆ ಇತ್ಯಾದಿಗಳು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಶ್ರಮವಹಿಸುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕಿಯರಾದ ಭವಾನಿ ಮಾಲಿಪಾಟೀಲ್, ಬಸಮ್ಮ ಆರ್, ದಾನೇಶ್ವರಿ, ಮೋನಿಕಾ, ಭಾಗ್ಯಶ್ರೀ, ಸುಧಾ, ರಾಜೇಶ್ವರಿ, ಅಂಬಿಕಾ, ಪೂಜಾ ಎಸ್, ಜ್ಯೋತಿ, ಪೂಜಾ ಕಲಬುರಗಿ, ಐಶ್ವರ್ಯಾ, ಗುಂಡಮ್ಮ ಸೇರಿ ಮುಂತಾದವರು ಹಾಜರಿದ್ದರು.