ವಿದ್ಯೆ ಪ್ರಗತಿಗೆ ಮೂಲ:ಶಾಂತಪ್ಪ ಹೇರೂರ

ಕಲಬುರಗಿ:ಆ.5: ನಗರದ ಶ್ರೀ ಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶಾಂತಪ್ಪ ಹೇರೂರ ಮಾತನಾಡುತ್ತಾ ಇಂದಿನ ಆಧುನಿಕ ಯುಗದಲ್ಲಿ ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸಹಕಾರ ಸಂಘಗಳು ಬಹಳ ಬೆಳೆದು ನಿಂತಿವೆ ಅವುಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು.
ಮಾನವನ ಸವಾರ್ಂಗೀಣ ಅಭಿವೃದ್ಧಿಗೆ ಶಿಕ್ಷಣವೇ ಮೂಲ
ಮಕ್ಕಳ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಬಿ.ಪಿ.ಬುಳ್ಳಾ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಲಕ್ಷ್ಮಪುತ್ರ ಜಮಾದಾರ ಪ್ರಥಮ ದರ್ಜೆ ಗುತ್ತೇದಾರ ನೆರವೆರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಹೊನ್ನಪ್ಪ ಪಟೇದ, ಶಿವಕುಮಾರ (ಪಿಂಟು) ಜಮಾದಾರ , ಶ್ರೀ ಸೈಬಣ್ಣಾ ಕೆ ವಡಗೇರಿ, ರಾಮಲಿಂಗ ನಾಟೀಕಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿಶೇಷ ಸನ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶ್ರೀಮತಿ ಶಾರದಾದೇವಿ ಕರ್ಣ ಬಿರಾದಾರ, ಶ್ರೀ ಮರೆಪ್ಪ ಮಿಣಜಿಗಿ, ಶ್ರೀಮತಿ ಸುನಿತಾ ರಾಮಲಿಂಗ ನಾಟಿಕಾರ,ಕಾಶಮ್ಮಾ ಯಲ್ಲಾಲಿಂಗ ಕೊಬಾಳ ಅವರಿಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಸದಸ್ಯರಾದ ಶ್ರೀ ಯಲ್ಲಾಲಿಂಗ ಕೊಬಾಳ, ಶ್ರೀ ಅರವಿಂದ ಹುಣಚಿಕೇರಿ,ಶ್ರೀಮತಿ ಸಂಗೀತಾ ಬುಳ್ಳಾ,ಧರ್ಮರಾಜ ಜವಳಿ, ಚಂದ್ರಕಾಂತ ತಳವಾರ,ರಾಜು ಸೊನ್ನ, ಬಸವರಾಜ ಮಳ್ಳಿ,ಮಾಣಿಕಮ್ಮಾ ವಾಡಿ,ಕರ್ಣ ಬಿರಾದಾರ, ವಿಜಯಲಕ್ಷ್ಮಿ ಜಮಾದಾರ, ಅಮೃತ ನಾಟೀಕಾರ, ರಾಜೇಂದ್ರ ತೆಲೂರ,ಅಂಬಣ್ಣ ಜಮಾದಾರ,
ಮಹಾಂತೇಶ ಬಂದರವಾಡ, ಜಗನ್ನಾಥ ಭೀಮಳ್ಳಿಕರ,ಸಂತೋಷ್ ಬಣ್ಣೂರ, ಕು.ಸೋನಾಲಿ ಬೆಟಗೇರಿ,ಕು.ರೇಣುಕಾ.ಆರತಿ ವಡಗೇರಿ, ಸಮಾಜದ ಬಂಧುಗಳು ಹಾಗೂ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸದಸ್ಯರು ಉಪಸ್ಥಿತರಿದ್ದರು.