ವಿದ್ಯೆ ನೀಡುವ ಶಿಕ್ಷಣ ಸಂಸ್ಥೆಯನ್ನು ಗೌರವಿಸಿ

ಮೈಸೂರು, ಡಿ.3:- ಗೀತಾ ಶಿಶು ಶಿಕ್ಷಣ ಸಂಘ (ರಿ) ಮೈಸೂರು ಇವರು ನಿರ್ಮಿಸಲು ಉದ್ದೇಶಿಸಿರುವ ನೂತನ ಜಿ.ಎಸ್.ಎಸ್.ಎಸ್ ಮಹಿಳಾ ವಾಸ್ತುಶಿಲ್ಪ ಮಹಾವಿದ್ಯಾಲಯದ ಶಂಕುಸ್ಥಾಪನೆ ಹಾಗೂ ಶಿಕ್ಷಣತಜ್ಞ ಮತ್ತು ದಾರ್ಶನಿಕ ದಿ.ಪೆÇ್ರ.ಬಿ ಎಸ್ ಪಂಡಿತ್ ಅವರ ನೆನಪಿಗಾಗಿ ಜಿ.ಎಸ್.ಎಸ್.ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಸ್.ಎಸ್.ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತೀ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಶಂಕರ ಭಾರತೀ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ನೂತನ ಜಿ.ಎಸ್.ಎಸ್.ಎಸ್ ಮಹಿಳಾ ವಾಸ್ತುಶಿಲ್ಪ ಮಹಾವಿದ್ಯಾಲಯದ ಶಿಲಾನ್ಯಾಸ ಹಾಗೂ ಜಿ.ಎಸ್.ಎಸ್.ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪೆÇ್ರ.ಬಿ.ಎಸ್. ಪಂಡಿತ್ ಸ್ಮಾರಕ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಇಂದು ಭಾರತದಲ್ಲಿ ಪೂಜಾ ಮಂದಿರಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆಯನ್ನು ವಿದ್ಯೆ ನೀಡುವ ಶಿಕ್ಷಣ ಸಂಸ್ಥೆಗೂ ನೀಡಬೇಕು, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಕೇವಲ ಹಣಗಳಿಕೆಯ ಉದ್ದೇಶದಿಂದ ಮಾಡದೇ ಸೇವಾಮನೋಭಾವನೆ ಮತ್ತು ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಕೊಳ್ಳುವ ದೃಷ್ಟಿಯಿಂದ ಕಲಿಕೆಯನ್ನು ಮುನ್ನೆಡಸಬೇಕು ಎಂದು ತಿಳಿಸಿದರು. ಗೀತಾ ಶಿಶು ಶಿಕ್ಷಣ ಸಂಘವು ಕಳೆದ 4 ದಶಕಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಶಿಶು ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ವನಜಾ ಬಿ ಪಂಡಿತ್ ಮಾತನಾಡಿ ಬಿ ಎಸ್ ಪಂಡಿತ್ ಅವರ ಆಶಯದಂತೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ಗೀತಾ ಶಿಶು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಸದಾ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.
ಗೀತಾ ಶಿಶು ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಬಿ.ವಿ ಶ್ರೀನಿವಾಸ ಗುಪ್ತಾ, ಜಂಟಿ ಕಾರ್ಯದರ್ಶಿಗಳವರಾದ ಓ ಪ್ರತಾಪ್ ಕುಮಾರ್, ಸದಸ್ಯರಾದ ಬಿ.ಕೆ ನಟರಾಜ್, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಆರ್ ಕೆ ಭರತ್, ಆಡಳಿತಾಧಿಕಾರಿಗಳಾದ ಅನುಪಮ ಬಿ ಪಂಡಿತ್ ಶ್ರೀ ಮಠದ ಆಡಳಿತಾಧಿಕಾರಿಗಳಾದ ಅನಂತ ಪದ್ಮನಾಭ, ಜಿ.ಎಸ್.ಎಸ್.ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಎಂ.ಶಿವಕುಮಾರ್, ಗೀತಾ ಶಿಶು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲೆಹೆಗಾರರಾದ ಪೆÇ್ರ.ಎಂ.ಎ ಚಂದ್ರಶೇಖರ್, ಜಿ.ಎಸ್.ಎಸ್.ಎಸ್ ಮಹಿಳಾ ವಾಸ್ತುಶಿಲ್ಪ ಮಹಾವಿದ್ಯಾಲಯದ ಶೈಕ್ಷಣಿಕ ಸಲೆಹೆಗಾರರು ಹಾಗೂ ವಾಸ್ತುಶಿಲ್ಪ ತಜ್ಞರಾದ ಶ್ರೀ ರಾಮಕೃಷ್ಣ ರಾವ್ ವಿಶೇಷ ಆಹ್ವಾನಿತರು, ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.