ವಿದ್ಯೆ ಕಲಿಸುವ ಗುರುಗಳಿಗೆ ಗೌರವದಿಂದ ಕಾಣಿರಿ : ನಮೋಶಿ

ಕಾಳಗಿ.ಜ.13. ಶಾಲಾ ಕಾಲೇಜುಗಳಲ್ಲಿ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ತಾವು ಕಂಡಂತೆ ಗುರು ಶಿಷ್ಯರ ಭಕ್ತಿ ಪೂರಕವಾಗಿರುವ ಸಂಬಂಧಗಳು ಕ್ರಮೇಣವಾಗಿ ಮರೆಮಾಚಿಹೋಗುತ್ತಿರುವ ಸನ್ನಿವೇಶಗಳಲ್ಲಿ, ದಕ್ಷಿಣ ಕಾಶಿ ಕಾಳಗಿ ಶ್ರೀ ಶಿವಬಸವೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾಳಪ್ಪಗೌಡ ಪೆÇಲೀಸ ಪಾಟೀಲ್ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗುರುಹಿರಿಯರಿಗೆ ನೀಡುವ ಗೌರವ ಹಾಗೂ ಅವರ ಶಿಸ್ತು ಬದ್ಧ ನಡೆವಳಿಕೆಗಳಿಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು, ಶಾಲಾ ಮಕ್ಕಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಪಟ್ಟಣದ ದಕ್ಷಿಣ ಕಾಶಿ ಕಾಳಗಿ ಶ್ರೀ ಶಿವಬಸವೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾಳಪ್ಪ ಗೌಡ ಪೆÇಲೀಸ್ ಪಾಟೀಲ್ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಂಜೆ ಆಗಮಿಸಿ, ತಮ್ಮ ಅನುದಾನದಲ್ಲಿ ತಲಾ 45 ಬ್ರಾಂಚ್ ಗಳನ್ನು ವಿತರಿಸಿ, ಶಾಲಾ ಶಿಕ್ಷಕರಿಂದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಒಂದು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಯನ್ನು ಕಾಣಬೇಕಾದರೆ ಅಲ್ಲಿಯ ಸಮಸ್ಕಾರಯುತ ಶಿಕ್ಷಕ, ಶಿಕ್ಷಣ ಮತ್ತು ಶಿಸ್ತು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ ಎಂದ ಅವರು, ಹಿಂದಿನ ಕಾಲದ ಗುರುಗುಲ ಪದ್ಧತಿಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ಗಟ್ಟಿತನವಾಗಿರುವ ಗುರು ಹಿರಿಯರ ಸಂಬಂಧಗಳು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯ, ತಂದೆ ತಾಯಂದಿರನ್ನು ಪೂಜ್ಯ ಭಾವನೆಯಿಂದ ಕಾಣುವುದನ್ನು ನಾವು ನೋಡುತ್ತೇವೆ. ಆದರೆ ಸದ್ಯದ ಪರಿಸ್ಥಿತಿಯೇ ಬೇರೆಯಾಗಿದೆ. ಇದಕ್ಕೆಲ್ಲ ನಮ್ಮ ಜೀವನ ಶೈಲಿ, ಬದಲಾಗುತ್ತಿರುವ ಮನಸ್ಸಿನ ವಿಚಾರಗಳೇ ಕಾರಣ ಎಂದರು. ಗ್ರಾಮೀಣ ಭಾಗದ ಮಕ್ಕಳನ್ನು ಸೇರಿ ನಗರ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಕೂಡ ವಿದ್ಯೆ ಕಲಿಸುವ ಗುರುಗಳಿಗೆ ಗೌರವದಿಂದ ಕಾಣಬೇಕಾಗಿರುವುದು ತುಂಬಾ ಪ್ರಮುಖವಾಗಿದೆ ಎಂದರು.

ವಿರೂಪಾಕ್ಷಯ್ಯ ಹಿರೇಮಠ, ಸತೀಶ್ ಪಾಟೀಲ್, ರೇವಣಸಿದ್ದಯ್ಯ ಹಿರೇಮಠ, ನಾಗವೇಣಿ ಹಿರೇಮಠ್, ಶಿವಲಿಂಗಪ್ಪ ಗೌಳಿ, ಬಾಬರ್ ಪಟೇಲ್, ಶೌಕತಲಿ ನಾವದಗಿಕರ್, ಸುಭಾಶ ಶೀಲವಂತ, ಶಿವಕುಮಾರ ಶಾಸ್ತ್ರಿ, ಮಹೇಶ ಬಡಿಗೇರ್, ಭಗವಾನ ಖಟಕೆ ಸೇರಿದಂತೆ ಅನೇಕ ಜನ ಶಿಕ್ಷಕರು ಇದ್ದರು.