ವಿದ್ಯೆ ಕಲಿಕೆಗೆ ಬಡವ ಶ್ರೀಮಂತ ಎಂಬ ಭೇದ ಭಾವವಿಲ

ಪಿರಿಯಾಪಟ್ಟಣ: ಆ:30- ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಪೆÇೀಷಕರು ಕಂಡ ಕನಸು ನನಸಾಗಿಸಲು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಸರ್ಕಾರಿ ನೌಕರರ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ವಿದ್ಯೆ ಕಲಿಕೆಗೆ ಬಡವ ಶ್ರೀಮಂತ ಎಂಬ ಭೇದ ಭಾವವಿಲ್ಲ ಉತ್ತಮವಾಗಿ ಕಲಿತವರು ಸಮಾಜದಲ್ಲಿ ಉತ್ತಮ ಹೆಸರು ಪಡೆಯುತ್ತಾರೆ ಎಂದರು.
ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ಮಹನೀಯರು ತಮ್ಮ ಸಮಾಜಗಳ ಅಭಿವೃದ್ಧಿಗೆ ಮಾತ್ರ ಶ್ರಮಿಸದೆ ಸರ್ವ ಜನಾಂಗದ ಹಿತ ಕಾಯಲು ತಮ್ಮ ಜೀವನ ಮುಡುಪಾಗಿಟ್ಟರು, ಅಂತಹವರನ್ನು ಪ್ರಸ್ತುತ ಸಮಾಜದಲ್ಲಿ ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಎಂದರು.
ಪತ್ರಕರ್ತ ಕೆ.ದೀಪಕ್ ಮಾತನಾಡಿ ತಮ್ಮ ಜೀವನದುದ್ದಕ್ಕೂ ಓದುವ ಗುರಿಯ ಮೂಲಕ ಉತ್ತಮ ಜ್ಞಾನಾರ್ಜನೆ ಪಡೆಯುವ ಹಂಬಲ ಹೊಂದಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರು ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ನಿಜವಾದ ಸ್ಫೂರ್ತಿಯಾಗಬೇಕು, ಮಾನವ ಸ್ವಾತಂತ್ರ್ಯಕ್ಕಾಗಿ ಸಂವಿಧಾನ ರಚಿಸಿದ ಅವರು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ವಿವಿಧ ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಸವರಾಜು, ಬಿಇಒ ತಿಮ್ಮೇಗೌಡ, ತಾ.ಪಂ ಸದಸ್ಯ ಟಿ.ಈರಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್, ಉಪ ಪ್ರಾಂಶುಪಾಲ ಪಿ.ಕೆ ಮಹದೇವ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಎಂ.ಕೆ ಪ್ರಕಾಶ್, ಶಿವಯೋಗ, ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ತಾಯಿ ಪುಟ್ಟಮ್ಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು, ಮುಖಂಡರಾದ ರಹಮತ್ ಜಾನ್ ಬಾಬು, ಅಣ್ಣಯ್ಯ, ಎನ್.ಆರ್ ಕಾಂತರಾಜು, ಸಿ.ಎಸ್ ಜಗದೀಶ್, ಬಿ.ಜೆ ದೇವರಾಜ್, ಆರ್ ತುಂಗಾ ಶ್ರೀನಿವಾಸ್, ಸೀಗೂರು ವಿಜಯ್ ಕುಮಾರ್, ಪಿ.ಮಹದೇವ್, ಕರಡಿಪುರ ಕುಮಾರ್, ಚನ್ನವೀರಯ್ಯ, ರಾಜಯ್ಯ, ಮಲ್ಲೇಶ್, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.