
ಅಥಣಿ : ಮಾ.2:ಗ್ರಾಮೀಣ ಭಾಗದಲ್ಲಿರುವಂತ ಬಡ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿದ್ಯಾಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಇನ್ನುಳಿದ ವಿದ್ಯಾರ್ಥಿಗಳು ಕೂಡಾ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದರು,
ಅವರು ತಾಲೂಕಿನ ನದಿ ಇಂಗಳಗಾವ ಗ್ರಾಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸನ್ 2021-22 ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ ಸುಮಾರು 2 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಅವರು ಮುಂದೆ ಮಾತನಾಡುತ್ತಾ ಈ ಆಧುನಿಕ ಯುಗದಲ್ಲಿ ವಿದ್ಯೆ ಕಲಿತವರು ಮಾತ್ರ ಬದುಕಲು ಸಾಧ್ಯವಿದೆ ಯಾರು ವಿದ್ಯೆಯಿಂದ ವಂಚಿತರಾಗುತ್ತಾರೋ ಅವರು ಜೀವನದಲ್ಲಿ ತುಂಬಾ ಕಷ್ಟ ನೋವುಗಳನ್ನು ಅನುಭವಿಸುತ್ತಾರೆ
ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸಿದರೆ ಶಿಕ್ಷಕರು ವಿದ್ಯೆ ಕಲಿಸುವುದರೊಂದಿಗೆ ಒಬ್ಬ ಒಳ್ಳೆಯ ನಾಗರಿಕನಾಗಿ ಮಾಡುತ್ತಾರೆ, ಇನ್ನು ಮುಂದಿನ ದಿನಮಾನಗಳಲ್ಲಿ ಇಡೀ ಜಗತ್ತನ್ನು ನಿಯಂತ್ರಣ ಮಾಡುವಂತಹ ಕಾಲ ಈ ಭಾರತ ದೇಶಕ್ಕೆ ಬರುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಲಿಂಗ ಸ್ವಾಮಿಜೀ ದೇಶಕ್ಕೆ ಒಂದು ಒಳ್ಳೆಯ ಪ್ರಜೆಯನ್ನು ಕೊಡುವಂತ ಇಲಾಖೆ ಯಾವುದಾರೆ ಇದ್ದರೆ ಅದು ಶಿಕ್ಷಣ ಇಲಾಖೆ ಗ್ರಾಮಕ್ಕೆ ಪಬ್ಲಿಕ್ ಶಾಲೆ ಒಳ್ಳೆಯ ಕಟ್ಟಡ ನಿರ್ಮಾಣ ಮಾಡಿರುವುದು ಖಷಿಯ ವಿಚಾರ ಲಕ್ಷ್ಮಣ ಸವದಿಯವರು ಮುಂದಿನ ದಿನಮಾನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಗಜಾನನ ಮನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಮಾತನಾಡಿದರು,
ಈ ವೇಳೆ ಮುಖಂಡರಾದ ವಿವೇಕ ನಾರಗೊಂಡ, ಎಸ್ ಆರ್ ಗೂಳಪ್ಪನ್ನವರ, ಎಸ್ ಡಿ ಎಮ್ ಸಿ ಅಧ್ಯಕ್ಷ ಸತೀಶ ಗುಂಡಕಲ್ಲ, ಗ್ರಾ ಪಂ ಅಧ್ಯಕ್ಷ ಶಂಕರ ಠಕ್ಕಣ್ಣವರ, ಪಿಕೆಪಿಎಸ್ ಅದ್ಯಕ್ಷ ಮಲ್ಲಪ್ಪ ಠಕ್ಕಣ್ಣವರ, ನಾಗಪ್ಪ ಗೂಳಪ್ಪನ್ನವರ, ಗುರುಬಸು ತೇವರಮನಿ,ಅಲಗೌಡ ಮುದಿಗೌಡರ, ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.