ವಿದ್ಯೆಗಾಗಿ ಸರಸ್ವತಿ, ಧನಕ್ಕಾಗಿ ಲಕ್ಷ್ಮೀ ಆರಾಧನೆ ಅಗತ್ಯ: ಕರ್ನಲ್ ಶರಣಪ್ಪ

ಬೀದರ:ನ.7: ನಮ್ಮ ಜೀವನದಲ್ಲಿ ಉತ್ತಮ ಆರೋಗ್ಯ, ಸಂತೋಷ, ನೆಮ್ಮದಿ, ಶಾಂತಿ, ಸಿರಿ ಸಂಪತ್ತು ಇವೆಲ್ಲವನ್ನು ನಮ್ಮ ಭಕ್ತಿಗೆ ತಕ್ಕಂತೆ ಮಾಹಾಲಕ್ಷ್ಮೀ ಕರುಣಿಸುವಳು. ಆಕೆಯ ದಯದಿಂದಲೆ ನಾವೆಲ್ಲ ಸಂತುಷ್ಟರಾಗಿದ್ದೇವೆ. ಆದ್ದರಿಂದ ಪ್ರತಿ ವರ್ಷ ಒಂದು ಬಾರಿಯಾದರೂ ಮಹಾಲಕ್ಷ್ಮೀ ಆರಾಧನೆಗಾಗಿ ಮಾ ಲಕ್ಷ್ಮೀ ಪೂಜೆ ಮಾಡಬೇಕೆಂದು ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಕರೆ ನೀಡಿದರು.

ಇತ್ತಿಚೀಗೆ ನಗರದ ಹೊರವಲಯದಲ್ಲಿರುವ ತಾಲೂಕಿನ ಬೆನಕನಳ್ಳಿ ಗ್ರಾಮಕ್ಕೆ ಹತ್ತಿರವಿರುವ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯಲ್ಲಿ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಇಂದು ಭಾರತ ವಿಶ್ವಕ್ಕೆ ಗುರುವಾಗಲು ನಮ್ಮಲ್ಲಿನ ಪೂಜೆ, ಆರಾಧನೆ, ಅಧ್ಯಾತ್ಮ, ಯೋಗ, ಧ್ಯಾನ ಇತ್ಯಾದಿ ಕಾರಣವಾಗಿವೆ. ವರ್ಷದ 12 ತಿಂಗಳು ಒಂದಲ್ಲ ಒಂದು ರೀತಿಯ ದೇವವಾರಾಧನೆ ನಡೆಯುತ್ತಿರುತ್ತದೆ. ಈ ಪರ್ಯೆಂಪರೆಯನ್ನು ಇಂದು ಜಗತ್ತು ಕೂಡ ಅನುಕರಿಸಲು ಹೊತಟಿರುವುದಕ್ಕೆ ನಮ್ಮ ದೇಶದ ಸಂಸ್ಕøತಿಯೇ ಮುಖ್ಯ ಕಾರಣ. ಇದಜಕ್ಕಾಗಿ ನಾವು ಹೆಮ್ಮೆ ಪಡಬೇಕು, ಭಕ್ತಿ ಭಾವದಿಂದ ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೇಳಿದರು.

ಶಾಲೆಯ ಟ್ರಸ್ಟಿ ವಿಮಲಾ ಸಿಕೆನಪುರೆ, ರೈಜಿಂಗ್ ಹ್ಯಾಂಡ್ಸ್ ಯುತ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ, ಶಾಲೆಯ ಮುಖ್ಯ ಗುರು ಪ್ರಥ್ವಿರಾಜ, ಪಿ.ಆರ್.ಓ ಕಾರಂಜಿ ಸ್ವಾಮಿ, ಎಲ್ಲ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಸೇನಾ ತರಬೇತಿಗೆ ಆಗಮಿಸಿದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತಾ ಪೂಜಾ ವಿಧಿ ನಡೆಸಿಕೊಟ್ಟರು.