ವಿದ್ಯುನ್ಮಾನ ಮಾಧ್ಯಮದಲ್ಲಿ ಕೌಶಲ್ಯಗಳು ತುಂಬಾ ಮುಖ್ಯ : ಡಾ. ಎಸ್. ವೈ. ಸೋಮಶೇಖರ್


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ6: ಪತ್ರಿಕೋದ್ಯಮದಲ್ಲಿ ಮಾತು, ಬರವಣಿಗೆ ತುಂಬಾ ಮುಖ್ಯ. ಇದರೊಂದಿಗೆ ಹಲವು ಬಗೆಯ ತಾಂತ್ರಿಕ ಕೌಶಲ್ಯಗಳ ಪರಿಣಿತಿ ಪಡೆದಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್. ವೈ. ಸೋಮಶೇಖರ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಂವಹನ ಮತ್ತು ತಾಂತ್ರಿಕ ಕೌಶಲ್ಯಗಳ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರು ಪೂರ್ವಗ್ರಹ ಪೀಡಿತರಾಗಿ ಸಿದ್ದಾಂತಗಳಿಗೆ ಜೋತು ಬೀಳಬಾರದು. ಅದರ ಬದಲಿಗೆ ಜನಸಾಮಾನ್ಯರಿಗೆ ತಿಳಿಸುವ ರೀತಿಯಲ್ಲಿ ಮಾರ್ಗದರ್ಶನ ಮಾಡುವಂತಾವರಾಗಬೇಕು. ಪತ್ರಕರ್ತರಾದವರು ವಸ್ತುನಿಷ್ಠವಾಗಿ ಸುದ್ದಿ ಮಾಡಬೇಕು. ಪತ್ರಿಕೋದ್ಯಮ ಕಲಿಯುವ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಾಯೋಗಿಕ ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಇದರಿಂದ ಉತ್ತಮ ಕೌಶಲ್ಯ ಜ್ಞಾನ ಹೊಂದಲು ಸಾಧ್ಯವಾಗುತ್ತದೆ.  ಪತ್ರಿಕೋದ್ಯಮ ಕಲಿತವರಿಗೆ ಕೇವಲ ಮಾಧ್ಯಮಗಳಲ್ಲದೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಅವಕಾಶಗಳಿವೆ ಇದಕ್ಕೆ ಉತ್ತಮ ಬರವಣಿಗೆ, ಭಾಷಾಜ್ಞಾನ ತುಂಬಾ ಮುಖ್ಯ ಎಂದರು.
ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಗ್ರಾಜ್ಯುವೇಟ್ ಸ್ಟಡೀಸ್‍ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೇಮಾವತಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ತಾಂತ್ರಿಕ ಪರಿಣಿತಿ ಹೊಂದಿದರೆ ಹೆಚ್ಚು ಬೆಳೆಯಲು ಸಾಧ್ಯ. ಮೂಲಭೂತವಾಗಿ ಯಾವುದೇ ವಿಷಯದಲ್ಲಿ ಸಾಮಾನ್ಯ ಕಲಿಕೆ ಎನ್ನುವಂತದ್ದು ತುಂಬಾ ಮುಖ್ಯವಾಗಿರುತ್ತದೆ. ಮಾಧ್ಯಮದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಾಗಿರಬೇಕು, ಇದರ ಜೊತೆಗೆ ಹೆಚ್ಚು ಓದುವುದರಿಂದ ಬರವಣಿಗೆಯಲ್ಲಿಯು ಯಶಸ್ಸು ಹೊಂದಬಹುದು. ಪತ್ರಿಕೋದ್ಯಮ ಕಲಿಯುವುದರೊಂದಿಗೆ ಉತ್ತಮ ಭಾಷೆ ಮತ್ತು ತಾಂತ್ರಿಕ ಜ್ಞಾನ ಹೊಂದಿದರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಹಲವು ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕ ಡಾ. ಲೋಕೇಶ ಎಸ್. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಗ್ರಾಜ್ಯುವೇಟ್ ಸ್ಟಡೀಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಬಸವರಾಜ ಬಿರಾದರ್ ಮತ್ತು ಆರ್ಯ ಅವರು ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕ  ಪದ್ಮಾವತಿ .ಕೆ ವಂದಿಸಿದರು. ಛಾಯಾಗ್ರಾಹಕರಾದ ಅಭಿರೂಪ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಶಿವಾನಂದ ನಿರೂಪಿಸಿದರು ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

One attachment • Scanned by Gmail