ವಿದ್ಯುನ್ಮಾನ ಮತಯಂತ್ರ ಮಸ್ಕಿಗೆ ರವಾನೆ

ರಾಯಚೂರು.ಏ.05- ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ನಗರದ ಡಿಡಿಪಿಯು ಕಛೇರಿ ಮುಂಭಾಗದ ಕ್ರಾಫ್ಟ್ ಹಾಲ್‌ನ ಭದ್ರತಾ ಕೊಠಡಿಯಿಂದ ಮಸ್ಕಿಗೆ ಅಗತ್ಯ ಮತ ಯಂತ್ರಗಳನ್ನು ಸ್ಥಳಾಂತರಿಸಲಾಯಿತು.
ಏ.17 ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಕೋಣೆಯಲ್ಲಿರುವ ಮತ ಯಂತ್ರಗಳನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ತೆರೆದು, ಪರಿಶೀಲಿಸಲಾಯಿತು. ಅಲ್ಲದೇ, ಭಾರೀ ಬಿಗಿ ಬಂದೋಬಸ್ತ್‌ನಲ್ಲಿ ಈ ಮತಯಂತ್ರಗಳನ್ನು ಮಸ್ಕಿಗೆ ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿಗಳಾದ ವೆಂಕಟೇಶಕುಮಾರ ಅವರು, ಈ ಪ್ರಕ್ರಿಯೆಗೆ ನಿಗಾವಹಿಸಿದ್ದರು.
ಈ ಸಂದರ್ಭದಲ್ಲಿ ರಾಜಶೇಖರ ಡಂಬಳ, ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.