ವಿದ್ಯುತ ಸಂಪರ್ಕ ಕಲ್ಪಿಸಲು ಜೆಸ್ಕಾಂ ಅಧಿಕಾರಿಗೆ ಮನವಿ

ಚಿಂಚೋಳಿ,ಮಾ.30- ತಾಲೂಕಿನ ಮಿರಿಯಾಣ ಗ್ರಾಮದ ಶ್ರೀರಾಮ ಕಾಲೋನಿಯಲ್ಲಿ ವಿದ್ಯುತ ಸಂಪರ್ಕ ಇಲ್ಲದೇ ಇಲ್ಲಿನ ನಾಗರಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಿರಿಯಾಣ ಗ್ರಾಮ ಪಂಚಾಯತ ಸದಸ್ಯರಾದ ಆಂಜನೇಯಲು ಗೌಡ್ಸ್ ಅವರು ಆರೋಪಿಸಿದ್ದಾರೆ.
ಚಿಂಚೋಳಿ ಜೆಸ್ಕಾಂ ಅಧಿಕಾರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿದ ಅವರು, ತಾಲೂಕಿನ ಮಿರಿಯಾಣ ಗ್ರಾಮದ ಶ್ರೀರಾಮ ಕಾಲೋನಿಯಲ್ಲಿ ಸಮಪರ್ಕ ವಿದ್ಯುತ ಪೂರೈಸಲು ಕೂಡಲೇ ವಿದ್ಯುತ ಕಂಬಗಳನ್ನು ಹಾಕಿಸಿ ಸಂಪರ್ಕ ಕಲ್ಪಿಸಕೊಡುವಂತೆ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಿರಿಯಾಣ ಗ್ರಾಮ ಪಂಚಾಯತ ಅಧ್ಯಕ್ಷರಾದ ಗೋಪಾಲ್ ಭೋವಿ ಕಲ್ಲೂರ್. ಮಿರಿಯಾಣ ಗ್ರಾಮ ಪಂಚಾಯತ ಸದಸ್ಯರಾದ ಲಲಿತಾ ಶರಣಪ್ಪ ಮಿರಿಯಾಣ. ಮಿರಿಯಾಣ ಗ್ರಾಮದ ಮುಖಂಡರಾದ ಚಂದ್ರಕಾಂತ ಇದ್ದರು.